ಇನ್ಸ್ಟಾಗ್ರಾಂನಲ್ಲಿ ಕಿಸ್ ಬೆಡಗಿ ನಟಿ ಶ್ರೀಲೀಲಾ ಸಂಚಲನ ಮೂಡಿಸಿದ್ದಾರೆ. ಅಲ್ಲು ಅರ್ಜುನ್ ಜೊತೆ ‘ಕಿಸ್ಸಿಕ್’ ಎಂದು ಶ್ರೀಲೀಲಾ ಹೆಜ್ಜೆ ಹಾಕಿದ್ಮೇಲೆ ಡ್ಯಾನ್ಸಿಂಗ್ ಕ್ವೀನ್ ಎಂದೇ ಟಾಲಿವುಡ್ನಲ್ಲಿ ಟಾಕ್ ಆಗಿದ್ದಾರೆ. ಸೌತ್ ಮತ್ತು ಬಾಲಿವುಡ್ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಕಿಸ್ಸಿಕ್ ಸಾಂಗ್ನ ಕಿಕ್ನಿಂದ ಇನ್ಸ್ಟಾಗ್ರಾಂನಲ್ಲಿ ಎರಡೇ ತಿಂಗಳಲ್ಲಿ 9 ಮಿಲಿಯನ್ ಇದ್ದ ಫಾಲೋವರ್ಸ್ ಈಗ 11 ಮಿಲಿಯನ್ಗೆ ಏರಿಕೆ ಆಗಿದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ CM ಸಿದ್ದರಾಮಯ್ಯ ಚಾಲನೆ!
2024 ಸೆಪ್ಟಂಬರ್ನಲ್ಲಿ ನಟಿ 6 ಮಿಲಿಯನ್ (60 ಲಕ್ಷ) ಫಾಲೋವರ್ಸ್ ಹೊಂದಿದ್ದರು. ಡಿಸೆಂಬರ್ 2024ರಲ್ಲಿ 9 ಮಿಲಿಯನ್ (90 ಲಕ್ಷ) ಫಾಲೋವರ್ಸ್ ಇತ್ತು. ಎರಡೇ ತಿಂಗಳಲ್ಲಿ ಇದೀಗ 11 ಮಿಲಿಯನ್ ( 1 ಕೋಟಿ, 10 ಲಕ್ಷ) ಫಾಲೋವರ್ಸ್ ಅನ್ನು ಶ್ರೀಲೀಲಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಶ್ರೀಲೀಲಾ ಮೇಲಿನ ಕ್ರೇಜ್ ಫ್ಯಾನ್ಸ್ಗೆ ಹೆಚ್ಚಾಗಿದೆ