ಲಕ್ನೋ:- ಆ ಪುಟ್ಟ ಬಾಲಕಿ ತನ್ನಷ್ಟಕ್ಕೆ ತಾನೇ ಆಟ ಆಡುತ್ತಿತ್ತು. ಸ್ನೇಹಿತರನ್ನು ಮಾತನಾಡಿಸಲು ಪರಿಚಯಸ್ಥರ ಮನೆಗೆ ಹೋದ ಮುದುಕನೊಬ್ಬ ಬಾಲಕಿ ಮೇಲೆ ಕೆಟ್ಟ ಕಣ್ಣು ಹಾಕಿದ್ದಾನೆ. ಅಷ್ಟೇ ಅಲ್ಲ ಬಾಲಕಿ ಬಳಿಕ ತನ್ನ ಕಾಮದ ದಾಹ ತೀರದೆ ಮೇಕೆಗೆ ರೇಪ್ ಮಾಡಿಬಿಟ್ಟಿದ್ದಾನೆ. ಇವೆಲ್ಲಾ ದೃಶ್ಯ ಸೆರೆಯಾಗಿದೆ.
ಕ್ರಿಕೆಟ್ ಪ್ರಿಯರು ನೋಡಲೇಬೇಕಾದ ಸ್ಟೋರಿ: ಪ್ರಮುಖ ಪಂದ್ಯ ಬೆಂಗಳೂರಿಗೆ ಶಿಫ್ಟ್!
ಹೌದು, ಉತ್ತರಪ್ರದೇಶದ ಬುಲಂದ್ಶಹರ್ನಲ್ಲಿ ವೃದ್ಧನೊಬ್ಬ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಮೇಕೆಯ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.
ಆರೋಪಿಯನ್ನು 50 ವರ್ಷದ ಗಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಶಿಕರ್ಪುರ ಬ್ಲಾಕ್ನಲ್ಲಿ ಸಹಾಯಕ ಅಭಿವೃದ್ಧಿ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ಸಿಂಗ್ ಪರಿಚಯಸ್ಥರೊಬ್ಬರ ಮನೆಗೆ ಹೋಗಿದ್ದನು. ಈ ವೇಳೆ ಅಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಕಂಡು ಆಕೆಯನ್ನು ಚುಂಬಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ತೃಪ್ತನಾಗದ ಕಾಮುಕ, ಅಲ್ಲಿಯೇ ಕಂಬಕ್ಕೆ ಕಟ್ಟಿ ಹಾಕಿದ್ದ ಮೇಕೆಯ ಮೇಲೆ ಎರಗಿದ್ದಾನೆ.
ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಬಳಿಕ ಕಾಮುಕನ ನೀಚ ಕೃತ್ಯದ ವೀಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ತಂಡ ಮತ್ತು ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.