ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಅಫ್ಘಾನಿಸ್ಥಾನ್ ಆಟಗಾರ ಗುರ್ಬಾಝ್ ಸರಿಗಟ್ಟಿದ್ದಾರೆ ಎನ್ನಲಾಗಿದೆ. ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದೇ ವಿಶೇಷ.
ಸಂಬಳವೂ ಇಲ್ಲ, ಮೊಟ್ಟೆ-ತರಕಾರಿಗೆ ಹಣವೂ ಇಲ್ಲ: ಅಂಗನವಾಡಿ ಕಾರ್ಯಕರ್ತೆಯರ ಗೋಳು ಕೇಳೋರ್ಯಾರು!?
ಶಾರ್ಜಾದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅಫ್ಘಾನಿಸ್ತಾನ್ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ವಿಶೇಷ ದಾಖಲೆ ಬರೆದಿದ್ದಾರೆ.
ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗುರ್ಬಾಝ್ 110 ಎಸೆತಗಳಲ್ಲಿ 3 ಸಿಕ್ಸ್, 10 ಫೋರ್ ಗಳೊಂದಿಗೆ 105 ರನ್ ಚಚ್ಚಿದ್ದರು. ಈ ಸೆಂಚುರಿಯೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
ಇದಕ್ಕೂ ಮುನ್ನ 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮಾತ್ರ ಕಾಣಿಸಿಕೊಂಡಿದ್ದರು. 23 ವರ್ಷದೊಳಗೆ 66 ಏಕದಿನ ಇನಿಂಗ್ಸ್ ಆಡಿದ್ದ ಕೊಹ್ಲಿ ಒಟ್ಟು 7 ಸೆಂಚುರಿ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ 23ನೇ ವಯಸ್ಸಿನಲ್ಲಿ 7ನೇ ಶತಕ ಪೂರೈಸುವ ಮೂಲಕ ರಹಮಾನುಲ್ಲಾ ಗುರ್ಬಾಝ್ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.