ವಿರಾಟ್ ಕೊಹ್ಲಿ ಬರೀ ಆನ್ಫೀಲ್ಡ್ನಲ್ಲಷ್ಟೇ ಕಿಂಗ್ ಅಲ್ಲ. ಅವರು ಆಫ್ ದಿ ಫೀಲ್ಡ್ನಲ್ಲಿ ರಾಜನೇ. ಕೊಹ್ಲಿ ಅತ್ಯಧಿಕ ಬ್ರ್ತಾಂಡ್ ವ್ಯಾಲ್ಯೂ ಹೊಂದಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸರ್ವಶ್ರೇಷ್ಠ ಕ್ಯಾಪ್ಟನ್ ಧೋನಿಯನ್ನೇ ಹಿಂದಿಕ್ಕಿದ್ದಾರೆ. ಅವರ ಪ್ರಸಕ್ತ ಬ್ರ್ಯಾಂಡ್ ವ್ಯಾಲ್ಯೂ 227.9 ಮಿಲಿಯನ್ ಡಾಲರ್. ಅಂದ್ರೆ ಬರೋಬ್ಬರಿ 1912 ಕೋಟಿ ರೂಪಾಯಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ್ದಾರೆ. ಭಾರತದ ಯಾವೊಬ್ಬ ಕ್ರಿಕೆಟ್ ಕೂಡ ಇಷ್ಟೊಂದು ಬ್ರ್ಯಾಂಡ್ ವ್ಯಾಲ್ಯೂ ಹೊಂದಿಲ್ಲ
1912 ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಅಂದ್ರೆ ನಿಜಕ್ಕೂ ದೊಡ್ಡ ಸಾಧನೇನೆ. ಈ ಮಟ್ಟಿಗೆ ವಿರಾಟ್ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಲು ಕಾರಣ ಮೇಜರ್ ಎಂಡೋರ್ಸ್ಮೆಂಟ್. ಹೌದು ಕೊಹ್ಲಿ ಜಗತ್ತಿನ ಟಾಪ್ ಬ್ರ್ಯಾಂಡ್ಸ್ಗಳು ಕೊಹ್ಲಿ ಜೊತೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ನೂರಾರು ಕೋಟಿ ರೂಪಾಯಿ ಹರಿದು ಬರುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್, ಆನ್ ಫೀಲ್ಡ್ನಲ್ಲಿ ತೋರುತ್ತಿರುವ ಅದ್ಭುತ ಪ್ರದರ್ಶನದ ಪರಿಣಾಮ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳವಾಗಿದೆ.
ಭಾರತದ ನಂ.1 ಕ್ರಿಕೆಟ್ ಸೆಲಬ್ರಟಿ ಆಗಿರೋ ಕಿಂಗ್ ಕೊಹ್ಲಿ 2023-24ನೇ ಸಾಲಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿ ಮಾದರಿಯಾಗಿದ್ದಾರೆ. ಕ್ರಿಕೆಟ್ ಹೊರತಾಗಿ ಕೊಹ್ಲಿ ವಿವಿಧ ಮೂಲಗಳಿಂದ ಹಣ ಗಳಿಸುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಗಳಲ್ಲಿ ಭಾರಿ ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅವರು ಭಾರತ ಸರ್ಕಾರಕ್ಕೆ ಬರೋಬ್ಬರಿ 66 ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿ ಹೊರತುಪಡಿಸಿದ್ರೆ ಯಾವೋಬ್ಬ ಇಂಡಿಯನ್ ಕ್ರಿಕೆಟರ್ ಇಷ್ಟೊಂದು ಟ್ಯಾಕ್ಸ್ ಕಟ್ಟಿಲ್ಲ.
66 ಕೋಟಿ ರೂಪಾಯಿ ತೆರಿಗೆ ಕಟ್ಟಿದ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 38 ಕೋಟಿ ರೂ ಪಾವತಿಸಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ 28 ಕೋಟಿ ರೂಪಾಯಿ ಹಾಗೂ ಸೌರವ್ ಗಂಗೂಲಿ 23 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 13 ಕೋಟಿ ರೂಪಾಯಿ ಟ್ಯಾಕ್ಸ್ ರೂಪದಲ್ಲಿ ಪಾವತಿಸಿದ್ದಾರೆ.
ಭಾರತದ ಸೆಲಬ್ರಿಟಿಗಳ ಪೈಕಿ ಹೆಚ್ಚು ಟ್ಯಾಕ್ಸ್ ಕಟ್ಟೋರ ಲಿಸ್ಟ್ನಲ್ಲಿ ಕಿಂಗ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಬಿಟೌನ್ ಬಾದ್ಷಾ ಶಾರೂಖ್ ಖಾನ್ 92 ಕೋಟಿ, ಕಾಲಿವುಡ್ನ ದಳಪತಿ ವಿಜಯ್ 80 ಕೋಟಿ, ಸಲ್ಮಾನ್ ಖಾನ್ 75 ಕೋಟಿ ಹಾಗೂ ಅಮಿತಾಬ್ ಬಚ್ಚನ್ 71 ಕೋಟಿ ರೂಪಾಯಿ ಟ್ಯಾಕ್ಸ್ ಪಾವತಿಸಿ ಅಗ್ರ ನಾಲ್ಕು ಸ್ಥಾನದಲ್ಲಿದ್ದಾರೆ.