ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ರು. ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಡೀ ಆಗ್ಲರ ಪಡೆಯೇ ಬೆಚ್ಚಿಬಿದ್ದಿತ್ತು. ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ ಹಲವು ದಿನಗಳ ಭರ್ಜರಿ ಅರ್ಧಶತಕ ಬಾರಿಸಿದ್ರು.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ ಒಂದು ರನ್ಗೆ ವಿಕೆಟ್ ಒಪ್ಪಿಸಿದ್ರು. ರೋಹಿತ್ ವಿಕೆಟ್ ಬಿದ್ರೂ ಟೀಮ್ ಇಂಡಿಯಾ ಪರ ಗಿಲ್ ಅಬ್ಬರಿಸಿದರು. ಇವರು ಬರೋಬ್ಬರಿ 500 ದಿನಗಳ ನಂತರ ತಮ್ಮ ಏಕದಿನ ಶತಕ ಬಾರಿಸಿದ್ದಾರೆ. ಇಷ್ಟು ದಿನಗಳ ನಂತರ ಗಿಲ್ ತಮ್ಮ 7ನೇ ಶತಕ ಪೂರೈಸಿದ್ರು.
ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಿದರು. ತಾನು ಎದುರಿಸಿದ 55 ಬಾಲ್ನಲ್ಲಿ 1 ಭರ್ಜರಿ ಸಿಕ್ಸರ್, 7 ಫೋರ್ ಸಮೇತ 52 ರನ್ ಸಿಡಿಸಿದರು. ಕೊಹ್ಲಿ ಇವತ್ತು ಸಿಡಿಸಿದ ಅರ್ಧಶತಕ ಇವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಸ ಕಳೆಯನ್ನೇ ನೀಡಿದೆ.
ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡ ಭಾರತ ತಂಡ ಈಗಾಗಲೇ ಏಕದಿನ ಸರಣಿ ಗೆದ್ದಿದೆ. ಅದರಲ್ಲೂ ರೋಹಿತ್, ಕೊಹ್ಲಿ ಕಮ್ಬ್ಯಾಕ್ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಟೀಮ್ ಇಂಡಿಯಾಗೆ ನೀಡಿದೆ.