ಬೆಂಗಳೂರು – ಕಿಲ್ಲರ್ ಅಂತಲೇ ಫೇಮಸ್ ಆಗಿದ್ದ ಬಿಎಂಟಿಸಿ, ಸಾಲು ಸಾಲು ಆಕ್ಸಿಡೆಂಟ್ ನಂತರ ಸ್ವಲ್ಪ ದಿನ ಶಾಂತವಾಗೆ ಇತ್ತು. ಆದ್ರೆ ನಿನ್ನೆಯ ಘಟನೆ ಫಿಲ್ಮಿ ಸ್ಟೈಲ್ ನಲ್ಲಿ ಬಂದ ಬಸ್ ಒಂದಲ್ಲ ಎರಡಲ್ಲ ಸಾಲು ಸಾಲು ಅಪಘಾತಕ್ಕೆ ಸಾಕ್ಷಿಯಾಗಿತ್ತು. ವಾಹನ ಸವಾರರ ಚಿರಾಟ ಕೂಗಾಟ ಎಲ್ಲರನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು.
Black Pepper: ಕಾಳು ಮೆಣಸಿನಿಂದ ಆಗುವ ಪ್ರಮುಖ ಪ್ರಯೋಜನಗಳೇನು ಗೊತ್ತಾ!?
ಬಿಎಂಟಿಸಿ, ksrtc ಬಸ್ ರಸ್ತೆಯಲ್ಲಿ ಬರ್ತಾ ಇದ್ರೆ ಸಾಕು ಎದೆ ಝಲ್ ಅನ್ನುತ್ತೆ. ಅದರ ಹತ್ತಿರ ಹೋಗಬೇಕು ಅಂದ್ರೆ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗುತ್ತದೆ. ಇದರಿಂದ ಆಗಿರುವ ಅಪಘಾತಗಳು ಒಂದೆರಡಲ್ಲ. ಕೆಲವರ ಪ್ರಾಣವೇ ಹಾರಿ ಹೋಗಿದೆ. ನಿನ್ನೆ ನಡೆದ ಘಟನೆ ಮತ್ತೊಮ್ಮೆ ಜನರನ್ನ ಬೆಚ್ಚಿ ಬೀಳಿಸಿದೆ.
ಹೌದು.. ನಿನ್ನೆ ಬೆಳಿಗ್ಗೆ 9-25 ಕ್ಕೆ ಹೆಬ್ಬಾಳ ಫ್ಲೈ ಓವರ್ ಮೇಲೆ ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಬಸ್ ಸಂಚಾರ ಮಾಡ್ತಿತ್ತು. ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಬರ್ತಾ ಇದ್ದ ಹಾಗೆ ಇದ್ದಕ್ಕಿದ್ದಂತೆ ನಾಲ್ಕು ಟೂ ವೀಲರ್, ನಾಲ್ಕು ಕಾರುಗಳಿಗೆ ಗುದ್ದಿದೆ. ಕೊಂಚ ಯಾಮಾರಿದ್ರು ಹತ್ತಾರು ವಾಹನ ಸವಾರರ ಪ್ರಾಣ ಹೋಗುತ್ತಿತ್ತು. ಬಿಎಂಟಿಸಿ ವೋಲ್ವೋ ಬಸ್ ನಂ- KA57F-1794 ನ ಚಾಲಕರಾದ ರಾಜಕುಮಾರ್ ನನ್ನು ಅಮಾನತ್ತಿನಲ್ಲಿಡಲಾಗಿದೆ. ವಾಹನ ಸವಾರರ ಅದೃಷ್ಟ ಚೆನ್ನಾಗಿತ್ತು. ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಸದ್ಯ ಆಕ್ಸಿಡೆಂಟ್ ಸಿಸಿ ಟಿವಿ ದೃಶ್ಯ ನೋಡಿದ್ರೆ ಮೈ ಜುಮ್ಮ ಎನ್ನುತ್ತೆ.
ಇನ್ನು ಘಟನೆಗೆ ಕಾರಣ ಏನೇಂಬುದು ತಿಳಿದು ಬಂದಿಲ್ಲ. ಬಸ್ ಚಾಲಕನ ಅಜಾಗರೂಕತೆಯೋ.. ಬಸ್ ತಾಂತ್ರಿಕ ಸಮಸ್ಯೆಯೋ ಅನ್ನೋದು ತಿಳಿಯಬೇಕಿದೆ. ಈ ಘಟನೆಯಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಒಂದು ಕಡೆ ವಾಹನ ಸವಾರರು ಓವರ್ಟೇಕ್ ನಿಂದ ಅಂತ ಹೇಳಿದ್ರೆ, ಇನ್ನೂ ಕೆಲವರು ಬಿಎಂಟಿಸಿ ಬಸ್ ಚಾಲಕನದ್ದೇ ತಪ್ಪು ಅಂತ ಆರೋಪಿಸುತ್ತಿದ್ದಾರೆ. ದಿನೇ ದಿನೇ ಬಿಎಂಟಿಸಿ ಅಪಘಾತಗಳ ಸಂಖ್ಯೆ ಹೆಚ್ಚಳವಾದ್ರೂ ಬಿಎಂಟಿಸಿ ತಲೆಕೆಡಿಸಿಕೊಳ್ಳತಿಲ್ಲ. ಈ ಕುರಿತು ಪ್ರಶ್ನೆ ಮಾಡಿದ್ರೆ ಬಿಎಂಟಿಸಿ ಅಧಿಕಾರಿಗಳು ಸ್ಪಂದಿಸೋಕೆ ಹಿಂದೇಟು ಹಾಕ್ತಿದ್ದಾರೆ. ಗಾಯಾಳುಗಳ ಖರ್ಚು ಭರಿಸೋಕು ಯೋಗ್ಯತೆ ಇಲ್ಲವಾ ಎಂದು ಜನ ಸವಾಲ ಹಾಕುತ್ತಿದ್ದಾರೆ. ನುರಿತ ತಜ್ಞರಿಂದ ಚಾಲಕರಿಗೆ ತರಬೇತಿ ನೀಡಿದ್ರೂ ಪದೇ ಪದೇ ಆಕ್ಸಿಡೆಂಟ್ ರೇಟ್ ವರದಿ ಆಗ್ತಾ ಇದೆ. ಇದರಿಂದ ಜನರಲ್ಲಿ ಕೊಂಚ ಆತಂಕ ವ್ಯಕ್ತವಾಗಿರೋದಂತು ಸತ್ಯವೇ.
ಹಲವಾರು ಅಪಘಾತಗಳ ಕಳಂಕ ಸಾರಿಗೆ ಇಲಾಖೆ ಮೇಲಿದ್ದು, ಇದನ್ನು ತಡೆಯಲು ಸಾರಿಗೆ ಇಲಾಖೆ ಮಾತ್ರ ಸೈಲೆಂಟ್ ಆಗಿದೆ. ಸಾರಿಗೆ ಸಚಿವರೆ ಗಮನ ಹರಿಸಬೇಕಿದೆ. ಒಟ್ಟನಲ್ಲಿ ಇದಕ್ಕೆಲ್ಲ ಯಾವಾಗ ಬ್ರೇಕ್ ಬೀಳುತ್ತೋ.. ಅಪಘಾತ ನಿಲ್ಲತ್ತೋ ಅಂತ ಕಾದು ನೋಡಬೇಕಿದೆ.