ನಾವು ಕಿಡ್ನಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವ ಆಹಾರಗಳನ್ನು ಸೇವಿಸಬಹುದು ಎಂಬುದನ್ನು ನೋಡೋಣ.
ರೀಲ್ಸ್ ಶೋಕಿ.. ಕ್ಯಾಮೆರಾ ಮುಂದೆ ದಂ ಹೊಡೆದು ಫೋಸ್ ಕೊಟ್ಟಿದ್ದ ಮಗಳಿಗೆ ಥಳಿಸಿದ ತಂದೆ..!
ಅರಿಶಿನದಲ್ಲಿ ಸಾಕಷ್ಟು ಆಂಟಿ ಇನ್ಫ್ಲಮೇಟರಿ ಗುಣಗಳಿರುವುದರಿಂದ ಕಿಡ್ನಿಯಲ್ಲಾಗಿರುವ ಉರಿಯೂತದ ಲಕ್ಷಣಗಳಿಗೆ ಇದು ಒಳ್ಳೆಯದನ್ನೇ ಮಾಡುತ್ತದೆ. ಬಿಸಿ ಹಾಲಿನಲ್ಲಿ ಚಿಟಿಕೆ ಅರಿಶಿನ ಹಾಕಿ ನಿತ್ಯವೂ ಸೇವಿಸಬಹುದು,
ಕೆಂಬಣ್ಣದ ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿರುವುದರಿಂದ ಇದು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿದೆ. ಇದು ಕಿಡ್ನಿಯ ಕಾರ್ಯಶೈಲಿಯನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ನೆಲ್ಲಿಕಾಯಿ ಚಟ್ನಿ, ಜ್ಯೂಸ್, ನೆಲಿಕಾಯಿ ಮೊರಬ್ಬ ಇತ್ಯಾದಿಗಳ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರಮಾಣದ ವಿಟಮಿನ್ ಸಿ ಪೂರೈಕೆ ಮಾಡಬಹುದು
ಬೆಳ್ಳುಳ್ಳಿಯು ಕೇವಲ ಕೊಲೆಸ್ಟೆರಾಲ್ ಇಳಿಸುವುದಕ್ಕೆ ಸಹಾಯ ಮಾಡುವುದಷ್ಟೇ ಅಲ್ಲ, ಅದು ಕಿಡ್ನಿಯ ಆರೋಗ್ಯವನ್ನೂ ಹೆಚ್ಚಿಸಿ ಚುರುಕಾಗಿಸುತ್ತದೆ. ಅಡುಗೆಯಲ್ಲಿ ಸಾಧ್ಯವಾದೆಡೆಯೆಲ್ಲ ಬೆಳ್ಳುಳ್ಳಿ ಬಳಸಿ. ಒಗ್ಗರಣೆಯಲ್ಲಿ ಬೆಳ್ಳುಳ್ಳಿಯನ್ನೂ ಸೇರಿಸಿ. ಆಗಾಗ ಬೆಳ್ಳುಳ್ಳಿ ಚಟ್ನಿ ಮಾಡಿ ಸೇವಿಸಿ. ಬೆಳ್ಳುಳ್ಳಿ ಪರಾಠಾ ಮಾಡಿ ಸೇವಿಸಿ. ಸೂಪ್ಗೆ ಬೆಳ್ಳುಳ್ಳಿ ಹಾಕಿ ಸೇವಿಸಿ
ನಾರಿನಂಶ ಹೆಚ್ಚಿರುವ ಬಾರ್ಲಿಯಂತಹ ಧಾನ್ಯವನ್ನು ಬಳಕೆ ಮಾಡಲು ಕಲಿಯಿರಿ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿಡಲು ಸಹಾಐ ಮಾಡುವುದಲ್ಲದೆ, ಕಿಡ್ನಿ ಸಮಸ್ಯೆಯನ್ನೂ ದೂರವಿರಿಸಲು ಸಹಾಯ ಮಾಡುತ್ತದೆ. ಬಾರ್ಲಿಯ ಒಂದು ಸರಳ ಸೂಪ್, ಅಥವಾ ತರಕಾರಿಗಳ ಜೊತೆಗೆ ಬಾರ್ಲಿಯನ್ನೂ ಬೇಯಿಸಿ ತಿನ್ನುವುದು ಇತ್ಯಾದಿಗಳನ್ನು ಟ್ರೈ ಮಾಡಬಹುದು.
ಬಾಳೆಮರದ ದಂಡೂ ಕೂಡಾ ಕಿಡ್ನಿಕಲ್ಲಿಗೆ ಅತ್ಯಂತ ಒಳ್ಳೆಯ ಔಷಧಿ. ಮನೆಮದ್ದಾಗಿ ಇದನ್ನು ಬಳಕೆ ಮಾಡಿ ಕಿಡ್ನಿ ಸಮಸ್ಯೆಯಿಂದ ಪಾರಾದವರೂ ಇದ್ದಾರೆ. ಬಾಳೆದಂಡಿನ ರಸ ಹಿಂಡಿ ಅದರ ಜ್ಯೂಸನ್ನು ನಿತ್ಯವೂ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ಆದರೆ, ಪೊಟಾಶಿಯಂ ಹೆಚ್ಚಾದರೆ ಅದೂ ಕಿಡ್ನಿಗೆ ಆಪತ್ತು ತರಬಹುದು ಎಂಬುದು ನೆನಪಿರಲಿ.
ನೈಸರ್ಗಿಕ ಎಲೆಕ್ಟ್ರೋಲೈಟ್ಗಳಿರುವ ಎಳನೀರು ದೇಹವನ್ನು ಸದಾ ತೇವಾಂಶದಿಂದಿಡಲು ಅನುಕೂಲಕರ. ಇದು ಕಿಡ್ನಿಯನ್ನು ಆರೋಗ್ಯವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇಹವನ್ನು ತಂಪಾಗಿಡುವ ಜೊತೆಗೆ ದೇಹಕ್ಕೆ ಬೇಕಾದ ಖನಿಜ ಲವಣಾಂಶಗಳನ್ನೂ ನೀಡುತ್ತದೆ. ಎಳನೀರಿನ ಜೊತೆಗೆ ನಿಂಬೆಹಣ್ಣು, ಪುದಿನ ಸೇರಿಸಿ ಕುಡಿಯುವುದರಿಂದಲೂ ಉತ್ತಮ ಪರಿಣಾಮ ಕಾಣಬಹುದು
ಶುಂಠಿಯಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ಗಳಿವೆ. ಇದು ಕಿಡ್ನಿಗೆ ಆಗುವ ಹಾನಿಗಳನ್ನು ತಡೆಯುತ್ತದೆ. ನಿತ್ಯವೂ ಶುಂಠಿಯನ್ನು ಆಹಾರದ ಜೊತೆಯಲ್ಲಿ ಬಳಕೆ ಮಾಡುವ ಮೂಲಕ ಶುಂಠಿಯ ಉಪಯೋಗವನ್ನು ಪಡೆಯಬಹುದು. ಬಿಸಿನೀರಿಗೆ ಶುಂಠಿಯನ್ನು ತುರಿದು ಹಾಕಿ ಕುಡಿಯುವುದು, ನಿಂಬೆಹಣ್ಣು, ಜೇನುತುಪ್ಪ ಸೇರಿಸಿ ಶುಂಠಿ ಚಹಾ ಮಾಡಿ ಕುಡಿಯುವುದು ಇತ್ಯಾದಿಗಳ ಮೂಲಕ ಶುಂಠಿಯ ಉಪಯೋಗವನ್ನು ದೇಹ ಪಡೆದುಕೊಳ್ಳುವಂತೆ ಮಾಡಬಹುದು.