ಬೆಂಗಳೂರು: ಕೆ.ಆರ್ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರೊಂದಿಗೆ ಪತ್ನಿ ಭವಾನಿ ರೇವಣ್ಣ (Bhavani Revanna) ಅವರನ್ನೂ ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಸೇರಿ 7 ಆರೋಪಿಗಳ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ (ACMM Court) ಎಸ್ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಅಲ್ಲದೇ ಭವಾನಿ ರೇವಣ್ಣರನ್ನ 8ನೇ ಆರೋಪಿಯಾಗಿ ಹೆಸರಿಸಲಾಗಿದೆ.
Renukaswamy Murder Case: ಆಗಸ್ಟ್ 14ರವರೆಗೆ ದರ್ಶನ್ಗೆ ಮತ್ತೆ ಜೈಲೇ ಗತಿ!
ರೇವಣ್ಣ ವಿರುದ್ಧ ಎಫ್ಐಆರ್ ರದ್ದು ಕೋರಿರುವ ಹಾಗೂ ರೇವಣ್ಣ ಜಾಮೀನು ರದ್ದಿಗೆ ಕೋರಿದ್ದ ಎರಡೂ ಅರ್ಜಿಗಳನ್ನು ಏಕಕಾಲಕಕ್ಕೆ ಹೈಕೋರ್ಟ್ನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಎಸ್ಐಟಿ ಪರ ಪ್ರೊ.ರವಿವರ್ಮಕುಮಾರ್ ವಾದ ಮಂಡಿಸಿದರು. ಸದ್ಯ ಜಾಮೀನು ರದ್ದು ಕೋರಿರುವ ಸಂಬಂಧ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಎಫ್ಐಆರ್ ರದ್ದು ಕೋರಿರುವ ಅರ್ಜಿ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಕೋರ್ಟ್ ಮುಂದೂಡಿದೆ.
ಎಸ್ಐಟಿ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದೆ. ಪ್ರಕರಣದ ಆರೋಪಿಗಳಾದ ರೇವಣ್ಣ ಮತ್ತು ಭವಾನಿ ಅಣತಿಯ ಮೇರೆಗೆ ಸಂತ್ರಸ್ತೆಯ ಅಪಹರಣ ನಡೆದಿದೆ. ರೇವಣ್ಣ ಏಪ್ರಿಲ್ 23ರಂದು ಸಂತ್ರಸ್ತೆಯನ್ನು ಹೊಳೆನರಸೀಪುರಕ್ಕೆ ಕರೆದು ಬೆದರಿಕೆ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಗಬಾರದು ಅಂತ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಏ.26ರಂದೇ ಸತೀಶ್ ಬಾಬು ಅವರ ಮೂಲಕ ಸಂತ್ರಸ್ತೆಯನ್ನ ಅಪಹರಣ ಮಾಡಿಸಿದ್ದಾರೆ ಎಸ್ಐಟಿ ಚಾರ್ಚ್ಶೀಟ್ನಲ್ಲಿ ಉಲ್ಲೇಖಿಸಿದೆ