ಬೆಂಗಳೂರು:- ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ ಮೂವರನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಂಜಯ್, ಮಂಗನಹಳ್ಳಿಯ ಆನಂದ ಮತ್ತು ನಾಗದೇವಹಳ್ಳಿ ನಿವಾಸಿ ಹನುಮಂತು ಬಂಧಿತ ಆರೋಪಿಗಳು. ಈ ಆರೋಪಿಗಳು ಕಿಶನ್ ಕುಮಾರ್ ಎಂಬ ಯುವಕನನ್ನು ಅಪಹರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ವಾಪಸ್ ಕಳುಹಿಸಿದ್ದರು. ಮೊದಲ ಪ್ರಯತ್ನ ವಿಫಲವಾದ ನಂತರ ಗುರುಸಿದ್ದಪ್ಪ ಎಂಬುವವರನ್ನು ಅಪಹರಿಸಿ, ಜೀವಂತವಾಗಿ ಬಿಟ್ಟರೆ ತೊಂದರೆ ಮಾಡಬಹುದು ಎಂಬ ಭಯದಿಂದ ರಾಮನಗರ ಜಿಲ್ಲೆ ಕೂಟಗಲ್ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕೊಲೆ ಮಾಡಿದ್ದರು. ಈಗ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿಗೆ 15 ವರ್ಷಗಳ ಹಿಂದೆ ಬಂದಿದ್ದ ಸಂಜಯ್, ಮಂಗನಗಳ್ಳಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆನಂದ್ ತರಕಾರಿ ಡೆಲಿವರಿ ಕೆಲಸ ಮಾಡುತ್ತಿದ್ದ. ಈತ ಹಲವು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ರಾಯಚೂರು ಮೂಲದ ಹನುಮಂತ ನಾಗದೇವಹಳ್ಳಿಯಲ್ಲಿ ನೆಲೆಸಿದ್ದ. ಗಾಂಜಾ ವ್ಯಸನಿಗಳಾಗಿದ್ದ ಈ ಮೂವರು ಹಣಕ್ಕಾಗಿ ವ್ಯಕ್ತಿಗಳನ್ನು ಹುಡುಕಿ ಅಪಹರಿಸುತ್ತಿದ್ದರು ಎಂದು ತಿಳಿದು ಬಂದಿದೆ.