ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ. ದೇಶದಾದ್ಯಂತ ಭಾರಿ ವಿಜೃಂಭಣೆಯಿಂದ ಈ ಜಯಂತಿಯನ್ನು ಆಚರಿಸಲಾಗಿದೆ. ಆದರೆ, ಧಾರವಾಡದ ಟಿಪ್ಪು ಸರ್ಕಲ್ ನಲ್ಲಿ ಮೇಲ್ಗಡೆ ಟಿಪ್ಪು ಧ್ವಜ ಹಾರಿಸಿ ಕೆಳಗಡೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರದ್ರೋಹದ ಕೆಲಸ ಮಾಡಿದ್ದಾರೆ ಎಂದು ಶ್ರೀ ರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಕೂಡಲೇ ರಾಷ್ಟ್ರ ದ್ರೋಹಿಗಳನ್ನು ಬಂಧಿಸಿ ದೇಶದ್ರೋಹಿ ಸೆಕ್ಷನ್ ಹಾಕಿ ಒದ್ದು ಒಳಗೆ ಹಾಕಬೇಕು. ಈ ರೀತಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ದೇಶಕ್ಕೆ ಅಪಮಾನ ಮಾಡಿದ ಹಾಗೆ. ಇಂತಹ ದೇಶ ದ್ರೋಹಿಗಳನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಇನ್ನೂ, ರಾಷ್ಟ್ರ ಧ್ವಜಕ್ಕೆ ಮಾಡಿದ ಈ ಅವಮಾನ ದೇಶಕ್ಕೆ ಹಾಗೂ ದೇಶ ಭಕ್ತರಿಗೆ ಮಾಡಿದ ಅವಮಾನ ಕೂಡಲೇ ಅಂತಹ ದೇಶ ದ್ರೋಹಿಗಳನ್ನು ಪೊಲೀಸರು ಬಂಧಿಸಬೇಕೆಂದು ಮುತಾಲಿಕ್ ಆಗ್ರಹಿಸಿದರು. ಅಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಶೂ ಕಟ್ಟುವಾಗ ಎಡಗೈಯಲ್ಲಿ ರಾಷ್ಟ್ರ ಧ್ವಜ ಬಲಗೈಯಲ್ಲಿ ಶೂ ಕಟ್ಟುವುದು ನೋಡಿದರೆ ಇವರ ದೇಶ ಭಕ್ತಿ ಗೊತ್ತಾಗುತ್ತದೆ. ರಾಷ್ಟ್ರ ಧ್ವಜಕ್ಕೆ ಗೌರವವಿಲ್ಲವೇ? ಮುಖ್ಯಮಂತ್ರಿ ಬೂಟು ಕಟ್ಟುವಾಗ ಧ್ವಜವನ್ನು ನೆಲಕ್ಕೆ ಹಾಗೂ ಶೂಗೆ ತಾಗಿಸಲಾಯಿತು.
ಇದನ್ನು ಸಿಎಂ ಹಾಗೂ ಪೊಲೀಸರು ಗಮನಿಸಲಿಲ್ಲವೇ? ಧ್ವಜವನ್ನು ಹಿಡಿದ ವ್ಯಕ್ತಿ ದೊಡ್ಡ ದ್ರೋಹಿ. ಅಲ್ಲಿ ನೆರೆದಿರುವ ಪ್ರತಿಯೊಬ್ಬರೂ ತಪ್ಪನ್ನು ಸರಿ ಮಾಡುವ ಪ್ರಕ್ರಿಯೆ ಸರಿಯಲ್ಲ. ರಾಷ್ಟ್ರ ಧ್ವಜಕ್ಕೆ ಗೌರವ ಕೊಡದ ಇಂತಹ ಸಮಾಜ ದ್ರೋಹಿಗಳಿಗೆ ಕಠಿಣ ಶಿಕ್ಷೆ ಕೊಡುವುದು ನಮ್ಮ ಕಾನೂನಿನಲ್ಲಿ ಇಲ್ಲ. ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಹಾಗೂ ರಾಷ್ಟ್ರಕ್ಕೆ ಅಪಮಾನ ಮಾಡಿದವರಿಗೆ ಹಾಗೂ ಬೆಂಗಳೂರಿನಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.