ದೊಡ್ಮನೆ (Bigg Boss Kannada 10) ಆಟ 5ನೇ ವಾರ ಪೂರೈಸಿದೆ. ಕಳೆದ ವಾರ ಬಳೆ ಜಗಳ ಹೈಲೆಟ್ ಆಗಿದ್ರೆ, ಈ ವಾರ ಉಸ್ತುವಾರಿ ನಿರ್ಣಯ ಬೇಸರ ತರಿಸಿದೆ. ಇದರ ನಡುವೆ ಇಶಾನಿ (Eshani) ಅವರು ಸುದೀಪ್ (Sudeep) ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೈಕಲ್ (Michael) ಅವರು ಎಲ್ಲ ತಪ್ಪಿಗೆ ನಾನೇ ಕಾರಣ ಅಂತ ಹೇಳಿದ್ದಕ್ಕೆ ಬೇಸರ ಆಯ್ತು ಎಂದು ಈಶಾನಿ ಕಣ್ಣೀರು ಹಾಕಿದ್ದಾರೆ. ನನ್ನ ಹಳೇ ರಿಲೇಶನ್ಶಿಪ್ನಲ್ಲಿಯೂ ನಾನೇ ತಪ್ಪು ಮಾಡಿದೆ ಅಂತ ಬಾಯ್ಫ್ರೆಂಡ್ಸ್ ಹೇಳಿದ್ರು, ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇಲ್ಲ ಎಂದು ಇಶಾನಿ ಕಣ್ಣೀರಿಟ್ಟಿದ್ದಾರೆ.
ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಅಂತ ಈಶಾನಿ, ಮೈಕಲ್ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಆಟವೊಂದರಲ್ಲಿ ಇಶಾನಿ, ಮೈಕಲ್ ಎರಡು ತಂಡಗಳಿಗೆ ಉಸ್ತುವಾರಿಯಾಗಿದ್ದರು. ಈಶಾನಿ ಉಳಿಯಬೇಕು ಅಂತ ಮೈಕಲ್ ಅವರು ತಮ್ಮ ಟೀಂ ಬಿಟ್ಟು, ಇಶಾನಿ ಟೀಂಗೆ ಹೇಗೆ ಆಟ ಆಡಬೇಕು, ತಂತ್ರ ಮಾಡಬೇಕು ಅಂತ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ ಈಶಾನಿ ಮಾತಿಗೆ ಕಟ್ಟುಬಿದ್ದು ನಿರ್ಣಯ ನೀಡಿದ್ದರು. ಈ ಬಗ್ಗೆ ಕಿಚ್ಚ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ
ಇಶಾನಿಗಾಗಿ ನಾನು ಆಟದಲ್ಲಿ ತಪ್ಪು ಮಾಡಿದ್ದೇನೆ, ಇದು ಸರಿ ಅಲ್ಲ, ನಾನು ಮಾಡಿರುವ ಕೆಲಸ ನನಗೆ ಸಮಾಧಾನ ಕೊಡ್ತಿಲ್ಲ. ನನಗೆ ತುಂಬ ಪಶ್ಚಾತ್ತಾಪ ಇದೆ ಅಂತ ಮೈಕಲ್ ಅವರು ಸುದೀಪ್ ಮುಂದೆ ಹೇಳಿದ್ದರು. ಅಷ್ಟೇ ಅಲ್ಲದೆ ಇಶಾನಿ ಅವರು ಮೈಕಲ್ ಬಳಿ ಬಂದು, ನಾನು ಮಾಡಿರೋದು ತಪ್ಪು ಅಂತ ಗೊತ್ತಾಗಿದೆ. ನನ್ನಿಂದ ನಿಮ್ಮನ್ನು ಎಲ್ಲರೂ ಅಪರಾಧಿ ಎನ್ನುವ ತರ ನೋಡ್ತಾರೆ ಅಂತ ಗೊತ್ತಿರಲಿಲ್ಲ, ಕ್ಷಮಿಸಿ ಅಂತ ಹೇಳಿದ್ದರು. ಆಗ ಮೈಕಲ್ ಅವರು, ನೀನಗೇನು ಅರ್ಥ ಆಗ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದೇವೆ, ನಾವಿಬ್ಬರೂ ಭೇಟಿ ಆಗಿ 1 ತಿಂಗಳು ಆಗಿದೆ ಅಷ್ಟೇ ಅಂತ ಮೈಕಲ್ ಖಡಕ್ ಆಗಿ ಮಾತನಾಡಿದರು.