ಮೈಸೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಚಿತ್ರವನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಬೆಂಗಳೂರು ನಗರದಲ್ಲಿ ಮ್ಯಾಕ್ಸ್ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಫಾಸ್ಟ್ ಫಿಲ್ಲಿಂಗ್ ಪ್ರದರ್ಶನ ಕಾಣುತ್ತಿದೆ. ಹಿನ್ನೆಲೆಯಲ್ಲಿ ಇಂದು ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ನಿರ್ಮಾಪಕ ಮತ್ತು ವಿತರಕರಾದ ಕಾರ್ತಿಕ್ ಗೌಡ ಅವರು ಕೂಡ ಕಿಚ್ಚನಿಗೆ ಸಾಥ್ ನೀಡಿದರು. ನೆಚ್ಚಿನ ನಟ ಸುದೀಪ್ ಭೇಟಿ ಹಿನ್ನೆಲೆ ಅಭಿಮಾನಿಗಳ ದಂಡೇ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದಿತ್ತು. ಸುದೀಪ್ರನ್ನು ನೋಡಿದ ಫ್ಯಾನ್, ಜೈಕಾರ, ಶಿಳ್ಳೆ ಹಾಕಿ ಖುಷಿಪಟ್ಟರು.
Kisan Credit Card: ಅನ್ನದಾತರಿಗೆ ಗುಡ್ ನ್ಯೂಸ್: ಈ ಯೋಜನೆ ಮೂಲಕ ಕಡಿಮೆ ಬಡ್ಡಿಗೆ ಸಿಗಲಿದೆ 3 ಲಕ್ಷ ತನಕ ಸಾಲ!
ಅಭಿಮಾನಿಗಳನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸವಾಯಿತು. ಚಾಮುಂಡಿ ದೇವಿಗೆ ಪೂಜೆ ಮುಗಿಸಿ ದೇವಾಲಯದಿಂದ ಸುದೀಪ್ ಹೊರಬಂದೊಡನೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ನಂತರ ಕಾರಿನೊಳಕ್ಕೆ ತೆರಳಿದ ಸುದೀಪ್ ಅವರು, ಅಭಿಮಾನಿಗಳತ್ತ ಕೈ ಬೀಸಿದರು.