ಬಿಗ್ ಬಾಸ್ ಮನೆಯ (Bigg Boss) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೀಗ 90 ದಿನ ಕಳೆದು ಮುನ್ನುಗ್ಗತ್ತಿದೆ. ಇದರ ನಡುವೆ ಮೈಕಲ್ ಸಿಡುಕು ವರ್ತನೆಗೆ ಸುದೀಪ್ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಸ್ಥಾನಕ್ಕೆ ಗೌರವ ನೀಡದ ಮೈಕಲ್ಗೆ (Michael) ಸುದೀಪ್ (Sudeep) ಬೆಂಡೆತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಮೈಕಲ್ಗೆ ಅಷ್ಟಾಗಿ ಕನ್ನಡ ಬರುತ್ತಿಲ್ಲ. ಇಲ್ಲಿಗೆ ಬಂದ್ಮೇಲೆಯೇ ಅವರ ಕನ್ನಡ ಸಾಕಷ್ಟು ಇಂಪ್ರೂವ್ ಆಗಿತ್ತು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಬಿಂಬಿತರಾದರು. ಬಿಗ್ ಮನೆಗೆ ಬಂದ ಮೊದಲ 6 ವಾರದಲ್ಲಿ ಅವರ ಆಟ, ಮಾತು, ನಡೆ- ನುಡಿ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಾತಿನ ವೈಖರಿಯೇ ಬದಲಾಗಿದೆ. ಅದರಲ್ಲೂ ಮನೆಯ ಕ್ಯಾಪ್ಟನ್ಗೆ ಮೈಕಲ್ ಉಲ್ಟಾ ಮಾತನಾಡುತ್ತಾರೆ.
ವಾರಾಂತ್ಯದ ಮಾತುಕತೆಯಲ್ಲಿ ಸಂಗೀತಾ (Sangeetha Sringeri) ಅವರ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಯಿತು, ಯಾರಿಗೆ ಇಷ್ಟ ಆಗಿಲ್ಲ ಎಂದು ಸುದೀಪ್ ಕೇಳಿದರು. ಇಷ್ಟ ಆಗಿಲ್ಲ ಎನ್ನುವುದಕ್ಕೆ ಕಾರ್ತಿಕ್- ಪ್ರತಾಪ್ ಕೈ ಎತ್ತಿದರು. ಇಷ್ಟ ಆಗುತ್ತಿದೆ ಎನ್ನುವುದಕ್ಕೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕೈ ಎತ್ತಿದರು. ವಿನಯ್, ನಮ್ರತಾ, ಮೈಕಲ್ ಮೊದಲಾದವರು ಸುಮ್ಮನೆ ಇದ್ದರು. ಈ ಬಗ್ಗೆ ಕೇಳಿದ್ದಕ್ಕೆ ಮೈಕಲ್ ಉಲ್ಟಾ ಮಾತನಾಡಿದರು.
ಸಂಗೀತಾ ಕ್ಯಾಪ್ಟನ್ಸಿ ಏನೂ ಬದಲಾವಣೆ ತರುತ್ತಿಲ್ಲ. ಹೀಗಿರುವಾಗ ಹೇಳೋದು ಏನು ಎಂದು ಮೈಕಲ್ ಪ್ರಶ್ನೆ ಮಾಡಿದರು. ಇದು ಸುದೀಪ್ಗೆ ಕೋಪ ತರಿಸಿತ್ತು. ಒಂದು ರೇಟಿಂಗ್ ಅಥವಾ ವೋಟಿಂಗ್ ಬರುತ್ತದೆ. ಅದಕ್ಕೆ ಉತ್ತರಿಸಿದ್ರೆ ಮಾತಾಡೋಣ. ಜಡ ಹಿಡಿದ ದೇಹ ಭಾಷೆ ಬೇಡ. ಸುಮ್ನೆ ಒಂದು ಹಿಂಟ್ ಕೊಡ್ತೀನಿ. ಇದೆಲ್ಲ ನನ್ನತ್ರ ಬೇಡ. ನಾನು ಸರಿ ಇಲ್ಲ. ಪ್ರೀತಿಯಿಂದ ಮಾತನಾಡಿದ್ರೆ ಮಾತನಾಡುವುದಕ್ಕೆ ಬರುತ್ತದೆ. ನನ್ನ ವ್ಯಕ್ತಿತ್ವ ಟೆಸ್ಟ್ ಮಾಡಬೇಡಿ ಎಂದು ಮೈಕಲ್ಗೆ ಸಖತ್ ಆಗಿಯೇ ಕಿಚ್ಚ ಬೆಂಡೆತ್ತಿದ್ದಾರೆ.