ಧಾರವಾಡ: ಧಾರವಾಡದಲ್ಲಿರುವ ಕೆಐಎಡಿಬಿಯಲ್ಲಿ ನಡೆದಿರುವ ಹಗರಣ ಬಗೆದಷ್ಟು ಬಯಲಾಗುತ್ತಲೇ ಇದೆ. ಇತ್ತೀಚೆಗಷ್ಟೇ ಈ ಕೆಐಎಡಿಬಿಯಿಂದ ಅಂದಾಜು 20 ಕೋಟಿಯಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಈ ಹಿಂದೆ ದಾಖಲೆ ಬಿಡುಗಡೆ ಮಾಡಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಈ ಕುರಿತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೀಗ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ವೀಕ್ ಚಾರ್ಜ್ಶೀಟ್ ಸಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು! ಈ ಹಿಂದೆ ಕೆಐಎಡಿಬಿಯಲ್ಲಿನ ಕೆಲ ಅಧಿಕಾರಿಗಳು 20 ಕೋಟಿ ಹಣವನ್ನು ಡಬಲ್ ಪೇಮೆಂಟ್ ಆಗಿ ಮಾಡಿಕೊಂಡಿದ್ದರು. ಈ ಸಂಬಂಧ ದಾಖಲೆಗಳನ್ನು ಸಹ ಕೊರವರ ಬಿಡುಗಡೆ ಮಾಡಿದ್ದರು. ಬಹುಕೋಟಿ ಹಗರಣ ಇದಾಗಿದ್ದರಿಂದ ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು 9 ತಿಂಗಳು ತನಿಖೆ ಮಾಡಿದ್ದರು. ಅಲ್ಲದೇ ಈ ಸಂಬಂಧ ತನಿಖಾಧಿಕಾರಿ ಎಲ್.ಆರ್.ಅಗ್ನಿ ಅವರು 2 ಸಾವಿರ ಪುಟಗಳುಳ್ಳ ಚಾರ್ಜ್ಶೀಟ್ ಸಲ್ಲಿಸಿದ್ದರು. ಆದರೆ, ಅವರು ಸಲ್ಲಿಸಿರುವ ಚಾರ್ಜ್ಶೀಟ್ ವೀಕ್ ಆಗಿದ್ದು, ಹಲವರನ್ನು ಬಚಾವ್ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಬಸವರಾಜ ಕೊರವರ ಮತ್ತೊಮ್ಮೆ ಆರೋಪಿಸಿದ್ದಾರೆ.
Dry Black Grapes Benefit: ಕಪ್ಪು ಒಣ ದ್ರಾಕ್ಷಿಯನ್ನ ತಿನ್ನೋದ್ರಿಂದ ಸಿಗುವ ಲಾಭಗಳು!
ಸದ್ಯ ಸಿಐಡಿ ಸಲ್ಲಿರುವ ಚಾರ್ಜ್ಶೀಟ್ನಲ್ಲಿ ಹಲವು ಅಧಿಕಾರಿಗಳ ಹೆಸರನ್ನು ಕೈಬಿಡಲಾಗಿದೆ. ಇನ್ನೂ ಮೂರು ಜನ ಹಿರಿಯ ಅಧಿಕಾರಿಗಳ ಬಂಧನ ಆಗಬೇಕಿದ್ದು, ಚಾರ್ಜ್ಶೀಟ್ನಲ್ಲಿ ಅವರ ಹೆಸರನ್ನೇ ಕೈಬಿಡಲಾಗಿದೆ. ಅಂದಿನ ಭೂಸ್ವಾಧೀನ ಅಧಿಕಾರಿಯಾಗಿದ್ದ ವಿ.ಡಿ.ಸಜ್ಜನ ಅವರ ನಿವೃತ್ತಿ ದಿನದಂದು 30 ಕೋಟಿಗೂ ಅಧಿಕ ಹಣ ಆರ್ಟಿಜಿಎಸ್ ಮಾಡಿದ್ದಾರೆ. ಎಲ್ಲವೂ ಕೇಂದ್ರ ಕಚೇರಿಯಿಂದ ಹಣ ಬಿಡಗಡೆಯಾಗಿದೆ. 30 ಕೋಟಿಗೂ ಅಧಿಕ ಗೋಲ್ಮಾಲ್ ಈ ಕೆಐಎಡಿಬಿಯಿಂದ ನಡೆದಿದ್ದು,
ಇದು ಉತ್ತರ ಕರ್ನಾಟಕದ ಬಿಳಿ ಆನೆಯಾದಂತಾಗಿದೆ. ಐಡಿಬಿಐ ಬ್ಯಾಂಕ್ ಮುಖಾಂತರ ಈ ಹಣ ಆರ್ಟಿಜಿಎಸ್ ಆಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕೊರವರ ಒತ್ತಾಯಿಸಿದ್ದಾರೆ. ಸಿಐಡಿ ಅಧಿಕಾರಿಗಳಿಂದ ನ್ಯಾಯ ಸಿಗುವುದಿಲ್ಲ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ನಿಯೋಗ ರಚನೆ ಮಾಡಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಸರ್ಕಾರ ಈಗಲಾದರೂ ಹಿರಿಯ ಅಧಿಕಾರಿಗಳ ರಕ್ಷಣೆಗೆ ನಿಲ್ಲುತ್ತಾ ಅಥವಾ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ.