ಕಲಬುರಗಿ: ಗ್ರಾಹಕರ ಸೋಗಿನಲ್ಲಿ ಬುರ್ಖಾ ಧರಿಸಿ ಜ್ಯುವೆಲರ್ಸ್ ಶಾಪ್ ಗೆ ಬಂದ ಇಬ್ಬರು ಮಹಿಳೆಯರು ಚಿನ್ನಾಭರಣ ಕಳವು ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ನಗರದ ಅನ್ನಪೂರ್ಣ ಕ್ರಾಸ್ ಬಳಿಯ ತನಿಷ್ಕಾ ಜುವೆಲರ್ಸ್ ಅಂಗಡಿಯಲ್ಲಿ ಘಟನೆ ನಡೆದಿದ್ದು ಕಳ್ಳಿಯರ ಕೈ ಚಳಕ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ..
ಎರಡು ಜೊತೆ ಬಳೆ ಬೇಕು ತೋರಿಸಿ ಅಂತ ಹೇಳಿದ್ದಾರೆ..ನಂತ್ರ ಅಂಗಡಿ ಸಿಬ್ಬಂದಿಗೆ ಯಾಮಾರಿಸಿ ಒಂದು ಬಳೆ ಎಗರಿಸಿ ರೈಟ್ ಹೇಳಿದ್ದಾರೆ..ಸಂಜೆ ಚಿನ್ನಾಭರಣ ಎಣಿಸುವ ವೇಳೆ ಕಳ್ಳತನ ಬೆಳಕಿಗೆ ಬಂದಿದೆ..ಪ್ರಕರಣ ದಾಖಲಿಸಿಕೊಂಡ ಬ್ರಹ್ಮಪುರ ಠಾಣೆ ಪೋಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ..
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)