ಚಿಕ್ಕಮಗಳೂರು:- ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಖಾಕಿ ಹೈ ಅಲರ್ಟ್ ಘೋಷಿಸಿದ್ದು, 4000 ಪೊಲೀಸರ ನಿಯೋಜನೆ ಮಾಡಲಾಗಿದೆ.
ಹಿಂದೂ ಪೀಠಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ 25 ನೇ ವರ್ಷದ ದತ್ತಜಯಂತಿ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಿದ್ದವಾಗಿದ್ದು, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಕಾಫಿನಾಡಿನಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದೆ.
ವರ್ಕ್ ಫ್ರಂ ಹೋಂ ಕೆಲಸ ಕೊಡಿಸುವುದಾಗಿ ಮಹಿಳೆಗೆ ವಂಚನೆ: ದಾಖಲಾಯ್ತು FIR!
ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. ಡಿಸೆಂಬರ್ 6 ರಂದು ದತ್ತಮಾಲಾ ಧಾರಣೆ ಮೂಲಕ ಆರಂಭವಾಗಿರುವ ದತ್ತಜಯಂತಿ 14ರವರೆಗೂ ನಡೆಯಲಿದೆ. ಪ್ರಮುಖ ಕಾರ್ಯಕ್ರಮಗಳು 12 ರಿಂದ 14 ರ ವರೆಗೂ ನಡೆಯಲಿದ್ದು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.
25ನೇ ವರ್ಷದ ದತ್ತಜಯಂತಿ ಹಿನ್ನೆಲೆ ವಿಹೆಚ್ಪಿ, ಭಜರಂಗದಳ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧರ್ಮ ಸಭೆ, ಶೋಭಾಯಾತ್ರೆ ನಡೆಯಲಿದೆ. ಶಾಂತಿಯುತ ದತ್ತಜಯಂತಿಗಾಗಿ ಚಿಕ್ಕಮಗಳೂರು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಅಲರ್ಟ್ ಆಗಿದ್ದು ಇಂದಿನಿಂದ ಚಿಕ್ಕಮಗಳೂರು ಪೋಲಿಸ್ ಕಾವಲಿನಲ್ಲಿ ಇರಲಿದೆ. 7 ಎಸ್ಪಿಗಳ ನೇತೃತ್ವದಲ್ಲಿ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. 27 ಮಂದಿ ಡಿವೈಎಸ್ಪಿ, 45 ಮಂದಿ ಇನ್ಸ್ಸ್ಪೆಕ್ಟರ್, 300 ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್, 500 ಮಂದಿ ಗೃಹ ರಕ್ಷಕದಳ ಸಿಬ್ಬಂದಿ, 20 ಕೆಎಸ್ಆರ್ಪಿ, 28 ಡಿಎಆರ್ ನಿಯೋಜನೆ ಮಾಡಲಾಗಿದೆ.
ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬಲು ರೂಟ್ ಮಾರ್ಚ್ ನಡೆಸಲು ಆರ್ಐಎಫ್ ತುಕಡಿಯನ್ನು ನಿಯೋಜಿಸಲಾಗಿದೆ.