ಕೋಲಾರ : ಕೋಲಾರ ನಗರದ ಶಾಲಾ ಕಾಲೇಜುಗಳ ಬಳಿ ಅಲೆಯುತ್ತಾ ಹೆಣ್ಣು ಮಕ್ಕಳನ್ನು ಚುಡಾಯಿಸುವ ಪುಂಡ ಪೋಕರಿಗಳಿಗೆ ಕೋಲಾರ ಮಹಿಳಾ ಪೊಲೀಸರನ್ನು ಒಳಗೊಂಡ ಕೋಲಾರಮ್ಮ ಪಡೆ ಕೆಲ ವರ್ಷಗಳ ಬಲಿಳ ಮತ್ತೆ ಕೆಲಸ ಶುರು ಮಾಡುವ ಮೂಲಕ ದುಃಸ್ವಪ್ನವಾಗಿ ಪರಿಣಮಿಸಿದೆ.
ದರ್ಶನ್ ಕೇಸ್ ಮುಚ್ಚಿಹಾಕುವ ಪ್ರಯತ್ನ!?.. DCM ಡಿಕೆಶಿ ಹೇಳಿದ್ದೇನು!?
ಮಹಿಳಾ ಸರ್ಕಾರಿ ಕಾಲೇಜು, ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜು, ಅಂತರಗಂಗೆ ರಸ್ತೆ, ಟೇಕಲ್ ರಸ್ತೆಯ ಶಾಲಾ ಕಾಲೇಜು ಸೇರಿದಂತೆ ವಿವಿಧೆಡೆ ಪುಂಡ ಪೋಕರಿಗಳು ಹಾವಳಿ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಈ ಪಡೆ ರಚಿಸಿದ್ದಾರೆ.
ಈ ವರೆಗೆ ಸುಮಾರು 50ರಿಂದ 60 ಯುವಕರನ್ನು ಪೊಲೀಸರು ಠಾಣೆಗೆ ಕರೆಯಿಸಿ ಬಿಸಿ ಮುಟ್ಟಿಸಿ ಎಚ್ಚರಿಕೆ ನೀಡಿದ್ದಾರೆ. ಹಲವರ ಬೈಕ್ಗಳನ್ನು ವಶಕ್ಕೆ ಪಡೆದು ತಲೆ ಕೂದಲಿಗೆ ಕತ್ತರಿ ಹಾಕಿ ಕಳುಹಿಸಿದ್ದಾರೆ.
ಗಲ್ಪೇಟೆ,ನಗರ ಠಾಣೆ ಹಾಗೂ ಮಹಿಳಾ ಠಾಣೆಯ ಹತ್ತು ಮಹಿಳಾ ಪೊಲೀಸರನ್ನು ಕೋಲಾರಮ್ಮ ಪಡೆಗೆ ನಿಯೋಜಿಸಲಾಗಿದೆ.ಅದಕ್ಕಾಗಿ ಇಬ್ಬರಿಗೆ ಒಂದರಂತೆ ದ್ವಿಚಕ್ರ ವಾಹನ ಕೊಡಿಸಲಾಗಿದೆ.ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಸಿಎಸ್ಆರ್ ಅನುದಾನದಲ್ಲಿ ಐದು ದ್ವಿಚಕ್ರ ವಾಹನ ನೀಡಿದ್ದಾರೆ.
ಮಹಿಳಾ ಪೊಲೀಸರು ಬೆಳಿಗ್ಗೆ ಶಾಲಾ ಕಾಲೇಜು ಆರಂಭವಾಗುವ ಸಮಯದಲ್ಲಿ ಹಾಗೂ ಸಂಜೆ ಮುಚ್ಚುವ ಸಮಯದಲ್ಲಿ ಗಸ್ತು ತಿರುಗುತ್ತಾರೆ. ನಿತ್ಯ ಕಂಟ್ರೋಲ್ ರೂಮ್ಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡುತ್ತಾರೆ.
ಇದಲ್ಲದೇ, ಮಹಿಳಾ ಹಾಸ್ಟೆಲ್ಗಳಿಗೆ ಸಂಜೆ ಹೊತ್ತಿನಲ್ಲಿ ಭೇಟಿ ನೀಡಿ ರಕ್ಷಣೆ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ಸಂಪರ್ಕ ಸಾಧಿಸಿ ಯಾವುದೇ ಸಮಸ್ಯೆ ಇದ್ದರೂ ಹೇಳಿಕೊಳ್ಳುವಂತೆ ಧೈರ್ಯ ತುಂಬುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿನಿಯರು ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.