ಬೆಂಗಳೂರು: ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆ ರೂಪಿಸಿದೆ. ಆದರೆ ಈ ಯೋಜನೆಗೂ ಕಳ್ಳಕಾಕರ ಕಾಟ ತಪ್ಪಿದ್ದಲ್ಲ.. ಅನ್ನಭಾಗ್ಯದ ಅಕ್ಕಿ ಮತ್ತು ರಾಗಿಯನ್ನ ಕಳ್ಳ ಸಾಗಣೆ ಮಾಡ್ತಿದ್ದ ಆಸಾಮಿಗಳು ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಈ ಕಳ್ಳತನದ ಕೇಸ್ ಆಗಿದ್ದೇಲ್ಲಿ ಅನ್ನೋದನ್ನ ತೋರಿಸ್ತಿವಿ ನೋಡಿ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಂದ್ರೆ ಅದು ಅನ್ನಭಾಗ್ಯ. ಬಡವರು ಒಂದರೆಡು ಹೊತ್ತು ಹೊಟ್ಟೆ ತುಂಬಾ ಊಟ ಮಾಡ್ಲಿ ಸರ್ಕಾರ ಈ ಯೋಜನೆಯಡಿ ಉಚಿತ ಅಕ್ಕಿ ಮತ್ತು ರಾಗಿ ಇನ್ನಿತರ ದವಸ ದಾನ್ಯಗಳನ್ನ ವಿತರತೆ ಮಾಡ್ತಿದೆ. ಆದ್ರೆ ಇಂತ ಯೋಜನೆಯನ್ನೂ ದುರುಪಯೋಗ ಪಡಿಸಿಕೊಳ್ತಿರೋ ಕಿಲಾಡಿಗಳು, ಟನ್ಗಟ್ಟಲೇ ಅನ್ನಭಾಗ್ಯದ ಅಕ್ಕಿ ಮತ್ತು ರಾಗಿಯನ್ನ ಕದ್ಯೊಯ್ಯುವಾಗ ಸಿಕ್ಕಿಬಿದ್ದಿದ್ದಾರೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಹೌದು. ಈ ಘಟನೆ ನಡೆದಿರೋದು ಬೆಂಗಳೂರಿನ ಹೊಸಕೆರೆಹಳ್ಳಿಯ ಕೆಇಬಿ ಜಂಕ್ಷನ್ ಬಳಿ. ಮೊನ್ನೆ ರಾತ್ರಿ ಗೂಡ್ಸ್ ವಾಹನದಲ್ಲಿ ಅನ್ನಭಾಗ್ಯದ ಅಕ್ಕಿ ಮತ್ತು ರಾಗಿಯನ್ನ ಟಾಟಾ ಏಸ್ ನಲ್ಲಿ ಕಳ್ಳ ಸಾಗಣೆ ಮಾಡ್ತಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಗಿರಿನಗರ ಠಾಣೆ ಪೊಲೀಸರು ಗೂಡ್ಸ್ ವಾಹನವನ್ನ ಅಡ್ಡಹಾಕಿ ಪರಿಶೀಲನೆ ಮಾಡಿದ್ರು. ಈ ವೇಳೆ ಗೂಡ್ಸ್ ವಾಹನದಲ್ಲಿ ಎರಡೂವರೆ ಟನ್ ಅಕ್ಕಿ ಮತ್ತು ರಾಗಿ ಇತ್ತು. ಇದರ ಬಗ್ಗೆ ಆಟೋದಲ್ಲಿ ಮೂವರು ಆರೋಪಿಗಳನ್ನ ವಿಚಾರಿಸಿದಾಗ ಇದು ಇಲಿಯಾಸ್ ನಗರದ ಅಮ್ಜದ್ ಖಾನ್ ಎಂಬುವರು ಗೋಡೌನ್ನಿಂದ ತುಂಬಿಕೊಂಡು ಬಂದಿರೋದಾಗಿ ಗೊತ್ತಾಗಿದೆ. ಬಳಿಕ ಈ ವಿಷಯವನ್ನ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಇದು ಅನ್ನಭಾಗ್ಯದ ಅಕ್ಕಿ ಮತ್ತು ರಾಗಿ ಎಂದು ದೃಡಪಡಿಸಿದ್ದಾರೆ.
ಸದ್ಯ ಅಕ್ಕಿ ಮತ್ತು ರಾಗಿಯನ್ನ ವಶಕ್ಕೆ ಪಡೆದ ಗಿರಿನಗರ ಪೊಲೀಸರು ನಾಲ್ವರ ವಿರುದ್ದ FIR ದಾಖಲು ಮಾಡಿದ್ದಾರೆ. ಹಾಗೆ ಅಬುಸೈಯದ್, ತಾಸಿಫ್ ಪಾಷಾ, ಮಹಮದ್ ಫಿರೋಜ್ ಎಂಬ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ. ಇನ್ನು ಅಕ್ಕಿ ಮತ್ತು ರಾಗಿ ಗೋಡೌನ್ಗೆ ಹೇಗೆ ಬಂತು, ಎಲ್ಲಿಗೆ ಹೋಗ್ತಿತ್ತು ಅನ್ನೊದರ ಬಗ್ಗೆ ತನಿಖೆ ಮುಂದುವರಿದಿದೆ. ಆದೇನೆ ಇರ್ಲಿ ಬಡವರಿಗೆ ಸೇರಬೇಕಾದ ಆಹಾರ ಧಾನ್ಯಕ್ಕೆ ಕನ್ನ ಹಾಕಿದ ಖತರ್ನಾಕ್ ಗಳಿಗೆ ಸರಿಯಾದ ಶಿಕ್ಷೆ ಆಗಬೇಕಿದೆ.