ಬೆಂಗಳೂರು ಗ್ರಾಮಾಂತರ: ಸಿನಿಮಾ ಸ್ಟೈಲ್ ನಲ್ಲಿ ಬ್ರಾಂಡೆಡ್ ಶೂ ಎಗರಿಸಿದ್ದ ಖದೀಮರು ಅರೆಸ್ಟ್ ಹಾಗೆ ಆ ಖದೀಮರು ಕೋಟಿ ಮೌಲ್ಯದ ನೌಕಿ ಶೂ ಕದ್ದಿದ್ದ ಅಸಾಮಿಗಳು ಆನೇಕಲ್ ಉಪವಿಭಾಗದ ಅತ್ತಿಬೆಲೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಖದೀಮರು ಅರೆಸ್ಟ್ ಆಗಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಮೂರು ಮಂದಿ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಅಸ್ಸಾಂ ಮೂಲಸ ಸುಭಾನ್ ಪಾಷಾ(30), ಮನ್ಸರ್ ಅಲಿ(26), ಶಹಿದ್ದುಲ್ ರೆಹಮಾನ್(26) ಬಂಧಿತರಾಗಿದ್ದು ಇನ್ನುಳಿದ ನಾಲ್ಕು ಮಂದಿ ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ.
BDA: ನೂರಾರು ಸಂತ್ರಸ್ತರಿಗೆ ಡಬಲ್ ದೋಖಾ ಮಾಡ್ತಿದ್ಯಾ ಬಿಡಿಎ..?: ಮಳೆಹಾನಿಯಾದವರಿಗೆ ಸಿಗಲೇ ಇಲ್ಲ ಬದಲಿ ನಿವೇಶನ..!
ಬ್ರಾಂಡೆಡ್ ಶೂ ಮತ್ತು ಬಟ್ಟೆಗಳನ್ನು ಕದಿಯುತ್ತಿದ್ದ ಖತರ್ನಾಕ್ ಗಳು ಮೊದಲು ಪ್ರತಿಷ್ಠಿತ ಕಂಪನಿಗಳ ಗೋದಾಮುಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ ಅಸಾಮಿಗಳು ಆ ನಂತರ ವಾರ ಹದಿನೈದು ದಿನ ಕೆಲಸದ ಬಳಿಕ ಪ್ರತಿಷ್ಠಿತ ಬ್ರಾಂಡ್ ಶೂ ಬಟ್ಟೆಗಳ ಕಳವು ಮಾಡುತ್ತಿದ್ದರು.
ಆನೇಕಲ್ನ ಶೆಟ್ಟಿಹಳ್ಳಿ ಬಳಿಯ ನೈಕಿ ಶೂ ಗೋದಾಮಿಗೆ ಕೆಲಸಕ್ಕೆ ಸೇರಿದ್ದ ಸಲೆ ಅಹಮದ್ ಹದಿನೈದು ದಿನ ಕೆಲಸ ಮಾಡಿ ಪ್ರತಿಷ್ಠಿತ ಬ್ರಾಂಡೆಡ್ ಶೂಗಳನ್ನು ಎಗರಿಸಿದ್ದ ಅಸಾಮಿಗಳು ನೈಕಿ ಕಂಪನಿಯ 1558 ಜೊತೆ ಶೂಗಳನ್ನ ಕಳ್ಳತನ ಮಾಡಿದ್ದ ಅಸಾಮಿಗಳುಆನೇಕಲ್ ತಾಲ್ಲೂಕಿನ ಶೆಟ್ಟಹಳ್ಳಿಯ ನೈಕಿ ಶೂರೂಂ ನಿಂದ ಶೂ ಲೋಡ್ ಆಗಿತ್ತು
ಅನುಗೊಂಡನಹಳ್ಳಿ ಸೌಖ್ಯರಸ್ತೆಯ ಮಿಂತ್ರ ಗೋಡೌನ್ಗೆ ಹೋಗಬೇಕಿದ್ದ ಕ್ಯಾಂಟರ್ ಲಾರಿ ಚಾಲಕ ಸಲೇ ಅಹಮದ್ ಲಷ್ಕರ್ ಖತರ್ನಾಕ್ ಐಡಿಯಾ ವಾಹನದ ಸಮೇತವಾಗಿ ಲೋಡ್ ಗಟ್ಟಲೇ ನೈಕಿ ಶೂ ಹೈಜಾಕ್
ಮೊದಲೇ ಪ್ಲಾನ್ ಮಾಡಿದಂತೆ ಬೇರೊಂದು ಕಡೆ ಶೂ ಅನ್ಲೋಡ್ ಮಾಡಿದ್ದ ಚಾಲಕ ಶೂಗಳನ್ನ ಅನ್ಲೋಡ್ ಮಾಡಿ ಅಲ್ಲಿಂದ ಹಣ ಪಡೆದಿದ್ದ ಅಸಾಮಿ ಬೆಂಗಳೂರಿನ ರಜಾಕ್ ಪಾಳ್ಯದಲ್ಲಿ ರೂಮ್ ನಲ್ಲಿ ಅನ್ಲೋಡ್ ಮಾಡಿಲಾಗಿತ್ತು
ಖಾಲಿ ಇದ್ದ ಈಚರ್ ವಾಹನವನ್ನ ಚಿಕ್ಕಜಾಲ ಬಳಿಯ ತರಬನಹಳ್ಳಿಯಲ್ಲಿ ಬಿಟ್ಟು ಪರಾರಿ ಜಿಪಿಆರ್ಎಸ್ ಚೆಕ್ ಮಾಡಿಕೊಂಡು ಹೋಗಿ ನೋಡಿದಾಗ ಈಚರ್ ವಾಹನ ಪತ್ತೆ
ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು ನತರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ನೈಕಿ ಕಂಪನಿಯ ಷೂಗಳನ್ನ ವಶಕ್ಕೆ ಪಡೆದಿದ್ದಾರೆ.