ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕಳೆದ ಕೆಲ ತಿಂಗಳ ಹಿಂದೆ ನಟ ಝಹೀರ್ ಇಕ್ಬಾಲ್ ನನ್ನು ಮದುವೆಯಾಗಿದ್ದಾರೆ. ಅಂತರ್ಜಾತಿ ಮದುವೆ ಎಂಬ ಕಾರಣಕ್ಕೆ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಸೋನಾಕ್ಷಿ ನಡೆಯನ್ನು ಸಾಕಷ್ಟು ಮಂದಿ ಟೀಕಿಸಿದ್ದರು. ಅಲ್ಲದೆ ಸ್ವತಃ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾಗೂ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳಲಾಗಿತ್ತು. ಇದೀಗ ಮಗಳು ಅಂತರ್ಜಾರಿ ಮದುವೆಯಾದುದ್ದನ್ನು ಟೀಕಿಸಿದರುವರಿಗೆ ಶತ್ರುಘ್ನ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಕುಮಾರ್ ವಿಶ್ವಾಸ್, ‘ನಿಮ್ಮ ಮಕ್ಕಳಿಗೆ ಸೀತಾಜಿಯ ಸಹೋದರಿಯರ ಹೆಸರುಗಳನ್ನು, ಭಗವಾನ್ ರಾಮನ ಒಡಹುಟ್ಟಿದವರ ಹೆಸರನ್ನು ಹೇಳಿಕೊಡಿ. ಅವರಿಗೂ ಹೇಳುವಂತೆ ಮಾಡಿ. ಸುಳಿವು ನೀಡಿ, ಅರ್ಥವಾಗುವವರಿಗೆ ಚಪ್ಪಾಳೆ ತಟ್ಟಿ. ನಿಮ್ಮ ಮಕ್ಕಳು ರಾಮಾಯಣ ಕೇಳುವಂತೆ, ಗೀತೆಯನ್ನು ಓದುವಂತೆ ಮಾಡಿ. ನಿಮ್ಮ ಮನೆ ಹೆಸರು ರಾಮಾಯಣ ಆಗಿರುತ್ತದೆ. ಆದರೆ, ನಿಮ್ಮ ಮನೆಯ ಲಕ್ಷ್ಮೀಯನ್ನು ಬೇರೆ ಯಾರಾದರೂ ತೆಗೆದುಕೊಂಡು ಹೋಗುತ್ತಾರೆ’ ಎಂದಿದ್ದಾರೆ.
ಇದೀಗ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ನಿಮ್ಮ ಅವಲೋಕನ ಮತ್ತು ಮಾಹಿತಿಗಾಗಿ ನಾನು ಇತ್ತೀಚಿನ ಕೆಲವು ಘಟನೆಗಳು, ಹೇಳಿಕೆಗಳು, ಪ್ರತಿಕ್ರಿಯೆಗಳ ಭಾಗವನ್ನು ಇಲ್ಲಿ ಲಗತ್ತಿಸುತ್ತಿದ್ದೇನೆ. ನನ್ನ ಕಣ್ಮಣಿ.. ನನ್ನ ಮಗಳು ಸೋನಾಕ್ಷಿ ಸಿನ್ಹಾ ಅವರಿಗೆ ನನ್ನ ಸಂಪೂರ್ಣ ಬೆಂಬಲ, ಪ್ರೀತಿ ಮತ್ತು ಆಶೀರ್ವಾದ ಸದಾ ಇರುತ್ತದೆ’ ಎಂದು ಪೋಸ್ಟ್ ಆರಂಭಿಸಿದ್ದಾರೆ.
‘ಇದು ಅವರಿಗೆ ಸಂಬಂಧಿಸಿದ ಪ್ರತಿಕ್ರಿಯೆಗಳು. ಈ ವಿಷಯವನ್ನು ನನ್ನ ಮಗಳು ಬಹಳ ಜಾಣತನದಿಂದ ಸರಿಯಾದ ಸಮಯಕ್ಕೆ ಸರಿಯಾಗಿ ನಿಭಾಯಿಸಿದ್ದಾಳೆ ಎಂದೇ ಹೇಳಬೇಕು. ಆಕೆಯ ಪ್ರತಿಕ್ರಿಯೆಯು ತುಂಬಾ ಮೆಚ್ಚುಗೆ ಪಡೆದಿದೆ. ರಾಜಕೀಯ ಮತ್ತು ಕಾಂಗ್ರೆಸ್ ಪಕ್ಷದ ಕೆಲವು ಸ್ನೇಹಿತರು ನೀಡಿದ ಪ್ರತಿಕ್ರಿಯೆಯಿಂದ ನನಗೆ ಖುಷಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
‘ಸೋನಾಕ್ಷಿ ಮತ್ತು ನಮ್ಮ ಕಡೆಯಿಂದ ಈ ವಿಷಯ ಇತ್ಯರ್ಥವಾಗಿದೆ. ಇನ್ನೇನಾದರೂ ಹೇಳಬೇಕೆ? ನಿಮ್ಮ ಮಾಹಿತಿಗಾಗಿ ನಾನು ಇಲ್ಲಿ ವಿವಿಧ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಜೈ ಹಿಂದ್!’ ಎಂದಿದ್ದಾರೆ ಅವರು. ಇತ್ತೀಚೆಗೆ ಮಾತನಾಡಿರುವ ಕೆಲವು ಕಾಂಗ್ರೆಸ್ ನಾಯಕರು ಸೋನಾಕ್ಷಿ ನಿರ್ಧಾರವನ್ನು ಬೆಂಬಲಿಸಿದ್ದರು.