ಕೆಜಿಎಫ್ : ಇತ್ತೀಚಿಗೆ ನಡೆದ ಕೋಲಾರ ಜಿಲ್ಲಾ ಮಟ್ಟದ 14 ವರ್ಷದ ವಯೋಮಿತಿಯ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಬೇತಮಂಗಲದ ಹೊಸ ಬಡಾವಣೆಯ ಸರ್ಕಾರಿ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಬಾಲಕಿಯರು ಚಿನ್ನದ ಓಟದ ಮೂಲಕ ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ 7ನೇ ತರಗತಿಯ ಭುವನ 100 ಮೀಟರ್ ಓಟ ಮತ್ತು 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು 4×100 ಮೀ ಓಟದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ ಇನ್ನುಳಿದಂತೆ ಗೌರಿ, ಶೈಲು ಮತ್ತು ಜಾಹ್ನವಿ 4×100 ಮೀ ಓಟದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
BBK 11: ಬಿಗ್ ಬಾಸ್ ಮನೆಯ 3ನೇ ಸ್ಪರ್ಧಿ ರಿವೀಲ್: ಜೈಲು ಹೊಸದಲ್ಲ, ಭಾಷಣ ನಿಲ್ಲಲ್ಲ; ಯಾರೀ ಚೈತ್ರಾ ಕುಂದಾಪುರ!
ಈ ಅದ್ಭುತ ಸಾಧನೆಗೈದ ಬಾಲಕಿಯನ್ನು ಇಂದು ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಮುಖ್ಯ ಶಿಕ್ಷಕರು ರಾಮಚಂದ್ರಪ್ಪ ಮಾತನಾಡಿ ನಮ್ಮ ಶಾಲಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬೇತಮಂಗಲ ಮತ್ತು ಕೆಜಿಎಫ್ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇದಕ್ಕೆ ಸಹಕರಿಸಿದ ದೈಹಿಕ ಶಿಕ್ಷಕರು ಸಹ ಶಿಕ್ಷಕರು ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಧನ್ಯವಾದ ಸಲ್ಲಿಸಿದರು. ಹಾಗೂ ಮುಂದಿನ ರಾಜ್ಯ ವಿಭಾಗ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿ ಜಿಲ್ಲೆಗೇ ಕ್ರೀರ್ತಿ ತರಲಿ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕಿ ವೆಂಕಟಲಕ್ಷ್ಮಮ್ಮ , ಸಹ ಶಿಕ್ಷಕರಾದ ಪ್ರಸನ್ನ ಕುಮಾರ್, ಜಯಶ್ರೀ, ಗೀತಾರಾಣಿ, ಅರುಣಾ, ಶಾಲಾ ಸಮಿತಿ ಅಧ್ಯಕ್ಷರಾದ ಮಂಗಳ, ಸದಸ್ಯರಾದ ಸುಮಿತ್ರ, ಸಾಕಮ್ಮ, ರಮೇಶ್, ರೂಪ, ಶಂಕರ್ ಸೇರಿದಂತೆ ಪೋಷಕರು ಹಾಗೂ ಕ್ರೀಡಾಪಟುಗಳು ಇದ್ದರು.