ಹಾಸನ : ಪೂಜೆಗೆ ನೀರು ತರಲು ಕೆರೆಗೆ ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಹಾಸನ ಹೊರವಲಯದ ಯಡಿಯೂರು ಬಳಿಯ ಸತ್ಯಮಂಗಲ ಕೆರೆಯಲ್ಲಿ ಘಟನೆ ನಡೆದಿದ್ದು, ಸುಮ (38) ನೀರನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುಮ ಹದಿನಾರು ವರ್ಷಗಳ ಹಿಂದೆ ಯಡಿಯೂರು ಗ್ರಾಮದ ಶಂಕರೇಗೌಡ ಎಂಬುವವರ ಜೊತೆ ವಿವಾಹವಾಗಿದ್ದರು. ಕೆಲ ತಿಂಗಳ ಹಿಂದೆ ಹೊಸ ಮನೆ ಕಟ್ಟಿ ಗೃಹಪ್ರವೇಶ ಮಾಡಿದ್ದರು. ಇಂದು ನೂತನವಾಗಿ ಕೊಟ್ಟಿಗೆ ನಿರ್ಮಾಣ ಮಾಡಿದ್ದು ಪೂಜೆಗೆಂದು ಮನೆಯ ಸಮೀಪವಿರುವ ಕೆರೆಗೆ ನೀರು ತರಲು ಮುಂಜಾನೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.
ಟಾಟಾ ವಿಂಗರ್ ವಾಹನ ಪಲ್ಟಿ: 14 ಕೂಲಿ ಕಾರ್ಮಿಕರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ!
ಅಮ್ಮ ಮನೆಯಲ್ಲಿ ಕಾಣದಿದ್ದಾಗ ಮಕ್ಕಳು ಅಪ್ಪ, ತಾತ ಹಾಗೂ ಅಜ್ಜಿಗೆ ಸುದ್ದಿ ತಿಳಿಸಿದ್ದರು. ಎಲ್ಲೆಡೆ ಹುಡುಕಾಡಿ ಸುಮ ಸಿಗದಿದ್ದ ವೇಳೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ವೇಳೆ ಕೆಲ ಹುಡುಗರು ಕೆರೆಯಲ್ಲಿ ಗಾಣ ಹಾಕಿ ಮೀನು ಹಿಡಯುತ್ತಿದ್ದಾಗ, ಸುಮ ಬಟ್ಟೆ ಮೀನಿನ ಗಾಣಕ್ಕೆ ಸಿಲುಕಿಕೊಂಡಿದೆ. ಗಾಣ ಮೇಲೆ ಎಳೆದಾಗ ಕೆರೆಯಲ್ಲಿ ಸುಮ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.