ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ದೇಶಿ ಕ್ರಿಕೆಟ್ ಮಾರ್ಗ ಹಿಡಿದಿದ್ದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ಗೆ ದೊಡ್ಡ ಹಿನ್ನಡೆ ಎದುರಾಗಿದೆ. ಇತ್ತೀಚೆಗೆ ಬುಚ್ಚಿ ಬಾಬು ಟ್ರೋಫಿ ಟೂರ್ನಿಯಲ್ಲಿ ಆಡಿ ಜಾರ್ಖಂಡ್ ಕ್ರಿಕೆಟ್ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಅವರನ್ನು ದುಲೀಪ್ ಟ್ರೋಫಿ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು.
ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿ ವೇಳೆ ಎದುರಾದ ಗಾಯದ ಸಮಸ್ಯೆ ಕಾರಣ ಇಶಾನ್ ಕಿಶನ್ ಇದೀಗ ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರಗುಳಿಯುವಂತ್ತಾಗಿದೆ. ಇಂಡಿಯಾ ಡಿ ತಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಸಿ ಎದುರು ಅನಂತಪುರದಲ್ಲಿ ಕಾದಾಟ ನಡೆಸಲಿದೆ. ಗಾಯಾಳು ಇಶಾನ್ ಕಿಶನ್ ಸ್ಥಾನಕ್ಕೆ ಕೇರಳದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರತಿಷ್ಠಿತ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಸ್ಪರ್ಧೆಯಿಂದ ಯುವ ವಿಕೆಟ್ಕೀಪರ್ ಇಶಾನ್ ಕಿಶನ್ ಹೊರಗುಳಿಯಲಿದ್ದಾರೆ. ದುರದೃಷ್ಟವಶಾತ್ ಅವರು ತೊಡೆಸಂದು ನೋವಿನ ಗಾಯದ ಸಮಸ್ಯೆಯಿಂದ ಬಳಲಿದ್ದಾರೆ. ಆಲ್ ಇಂಡಿಯಾ ಬುಚ್ಚಿ ಬಾಬು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅವರು ಜಾರ್ಖಂಡ್ ಕ್ರಿಕೆಟ್ ತಂಡದ ಪರ ಆಡುವ ಸಂದರ್ಭದಲ್ಲಿ ಈ ಗಾಯದ ಸಮಸ್ಯೆ ಎದುರಿಸಿದ್ದಾರೆ.
ಗೌರಿ ಹಬ್ಬದ ದಿನದಂದು ಮುಂಜಾನೆ ಸ್ನಾನ ಮಾಡಿದ ನಂತರ ಉಪವಾಸ ಮಾಡುವ ಪ್ರತಿಜ್ಞೆ ಮಾಡಿ. ಪೂಜಾ ಸ್ಥಳವನ್ನು ಹಣ್ಣುಗಳು ಮತ್ತು ಹೂವುಗಳಿಂದ ಅಲಂಕರಿಸಿ. ಒಂದು ಪೀಠವನ್ನು ಹಾಕಿ ಅದರ ಮೇಲೆ ಶಿವ, ಪಾರ್ವತಿ ಮತ್ತು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ. ಶಿವ ಮತ್ತು ತಾಯಿ ಪಾರ್ವತಿಯ ಮುಂದೆ ದೀಪವನ್ನು ಬೆಳಗಿಸಿ. ಇದರ ನಂತರ, ಮೇಕಪ್ ಪೆಟ್ಟಿಗೆಯಿಂದ ಸುಮಂಗಲಿಯರು ಬಳಸುವ ಎಲ್ಲಾ ವಸ್ತುಗಳನ್ನು ಇರಿಸಿ ಮತ್ತು ಅದನ್ನು ತಾಯಿ ಪಾರ್ವತಿಗೆ ಅರ್ಪಿಸಿ.