ಬೆಂಗಳೂರು: ಹಾಸನ ಸಮಾವೇಶ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ, ನನ್ನ ಉಚ್ಚಾಟನೆ ಮಾಡಿದ್ದರು. ಅವರು ಹೇಳಿದ್ದನ್ನೆಲ್ಲಾ ನೀವ್ಯಾಕೆ ಬರೀತೀರಾ..? ಕೇಂದ್ರ ಮಂತ್ರಿಗಳಾಗಿ ಬಿಟ್ರೆ ಸುಳ್ಳು ಹೇಳಿದ್ರೂ ಬರೆಯಬೇಕಾ..?, ನನ್ನನ್ನು ಮಿಸ್ಟರ್ ದೇವೇಗೌಡ ಅವರು ಉಚ್ಚಾಟನೆ ಮಾಡಿದರು. ಬೇರೆ ದಾರಿ ಇಲ್ಲದೇ ಅಹಿಂದ ಸಂಘಟನೆ ಮಾಡಿದೆ. ಅಹಿಂದ ಸಮಾವೇಶಗಳನ್ನ ಮಾಡಿದೆ. ಹಿಂದೆ ಹಾಸನದಲ್ಲೂ ಸಮಾವೇಶ ಮಾಡಿದ್ದೆವು. ಈಗ ಹಾಸನದಲ್ಲಿ ಕೃತಜ್ಞತಾ ಸಮಾವೇಶ ಮಾಡ್ತಿರೋದು. ಪಕ್ಷ ಹಾಗೂ ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ಏರ್ಪಡಿಸಿದ್ದಾರೆ
ಯತ್ನಾಳ್ ಉಚ್ಚಾಟನೆ ವಿಚಾರ : ಮಾಜಿ ಸಚಿವ ರೇಣುಕಾಚಾರ್ಯಗೆ ಪ್ರತಾಪ್ ಸಿಂಹ ತಿರುಗೇಟು
ಕೇವಲ ಸ್ವಾಭಿಮಾನಿ ಒಕ್ಕೂಟದಿಂದ ಸಮಾವೇಶ ನಡೆಯುತ್ತಿಲ್ಲ. ಜಂಟಿ ಆಶ್ರಯದಲ್ಲಿ ಸಮಾವೇಶ ನಡೀತಿದೆ. ಸುರ್ಜೇವಾಲಾ, ಖರ್ಗೆಯಗರಿಗೂ ಆಹ್ವಾನಿಸಿದ್ದೀನಿ. ಇಂದು ಮೀಟಿಂಗ್ ಕೂಡ ಕೆಪಿಸಿಸಿಯಿಂದ ಮಾಡ್ತಿದ್ದಾರೆ. ನನ್ನ ಉಚ್ಚಾಟನೆ ಮಾಡಿದ್ಮೇಲೆ ನಾನ್ ಏನ್ ಮಾಡಬೇಕಿತ್ತು. ಜೆಡಿಎಸ್ ಈಗ ಸೆಕ್ಯೂಲರ್ ಆಗಿ ಉಳಿದಿದ್ಯಾ, ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಸೆಕ್ಯೂಲರ್ ಆಗಿ ಉಳಿದಿದ್ಯಾ. ಸಂವಿದಾನದಲ್ಲಿ ಸೆಕ್ಯುಲರಿಸಂ ಇರಬೇಕು.. ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಯಾವ ಹಿನ್ನೆಲೆಯಲ್ಲಿ ಆಯ್ತು ಅನ್ನೋದು ಹೆಚ್ ಡಿಕೆಗೆ ಗೊತ್ತಿಲ್ಲ. ಜೆಡಿಎಸ್ ಆದಾಗ ಕುಮಾರಸ್ವಾಮಿ ಪಕ್ಷದಲ್ಲಿ ಇರಲಿಲ್ಲ. ನಾನು, ದೇವೇಗೌಡ, ಮಹದೇವಪ್ಪ, ವೆಂಕಟೇಶ್, ಸತೀಶ್ ಜಾರಕಿಹೊಳಿ ಎಲ್ಲಾ ಜೆಡಿಎಸ್ ಪಕ್ಷ ಕಟ್ಟಿದ್ವಿ. ಆಗ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಭಾಗ ಆಗಿರಲಿಲ್ಲ ಎಂದು ತಿರುಗೇಟು ನೀಡಿದರು,