ಯಾದಗಿರಿ: ತೀವ್ರ ಕುತೂಹಲ ಮೂಡಿಸಿದ್ದ ಕೆಂಭಾವಿ ಪುರಸಭೆ ಕಾಂಗ್ರೆಸ್ ಪಾಲಾಗಿದೆ. ಕೆಂಭಾವಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ದಾಖಲಿಸಿದ್ದು, ಬಹುಮತವಿದ್ದರೂ ಸಹ ಅಧಿಕಾರ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಸಚಿವ ಶರಣಬಸಪ್ಪಗೌಡ ದರ್ಶನಾಪುರ ಚಾಣಾಕ್ಷ ನಡೆಯಿಂದ ಬಿಜೆಪಿಗೆ ಸೋಲಾಗಿದೆ.
ರಾಜಕೀಯ ಹೇಳಿಕೆಗಳಿಂದ ಪೊಲೀಸರ ನೈತಿಕತೆ ಕುಗ್ಗಿಸಲು ಸಾಧ್ಯವಿಲ್ಲ: ಸಚಿವ ಜಿ.ಪರಮೇಶ್ವರ್
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ 23 ಸದಸ್ಯರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 13 ಸದಸ್ಯರ ಬಲ ಹೊಂದಿದ್ದು,ಕಾಂಗ್ರೆಸ್ ಕೇವಲ 8 ಸದಸ್ಯರನ್ನು ಹೊಂದಿದೆ. ಆದರೆ ಬಿಜೆಪಿಯ ಆಂತರಿಕ ಬಿಕ್ಕಟ್ಟಿನಿಂದ ಅಧಿಕಾರ ಕೈ ತಪ್ಪಿದ್ದು, ಪುರಸಭೆ ಅಧ್ಯಕ್ಷರಾಗಿ ರಹಮಾನ್ ಪಟೇಲ್ ಆಯ್ಕೆಯಾಗಿದ್ದಾರೆ. ಕೆಂಭಾವಿ ಠಾಣೆಯ ಪಿಎಸಐ ಅಮೋಜ ಕಾಂಬಳೆ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಲ್ಲಿ ಚುನಾವಣೆ ನಡೆಯಿತು.