ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರೊಂದಿಗೆ ಗೋವಾದಲ್ಲಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಕೀರ್ತಿ ಸುರೇಶ್ ಹಾಗೂ ಆಂಟನಿ ಬಳಿಕ ಕ್ರಿಶ್ಚಿಯನ್ ಪದ್ದತಿಯಂತೆ ಮದುವೆಯಾಗಿದ್ದಾರೆ.
ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಜೋಡಿ ಬಳಿಕ ಅದ್ದೂರಿಯಾಗಿ ಪಾರ್ಟಿ ಸೆಲೆಬ್ರೇಟ್ ಮಾಡಿದ್ದಾರೆ. ಪಾರ್ಟಿಯಲ್ಲಿ ಕೀರ್ತಿ ಸುರೇಶ್ ವೈಟ್ ಗೌನ್ ನಲ್ಲಿ ಮಿಂಚಿದ್ದಾರೆ.
ಕೀರ್ತಿ ಪತಿ ಆಂಟೋನಿ ವೈಟ್ ಶೂಟ್ ಹಾಗೂ ಟೈನೊಂದಿಗೆ ಬಿಳಿ ಪ್ಯಾಂಟ್ ಮತ್ತು ಸೂಟ್ ನಲ್ಲಿ ಮಿಂಚಿದ್ದಾರೆ. ಈ ಪಾರ್ಟಿಯ ಫೋಟೋಗಳನ್ನು ಕೀರ್ತಿ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಪಾರ್ಟಿಯಲ್ಲಿ ಕೀರ್ತಿ ಸುರೇಶ್ ತನ್ನ ಬಾಯ್ ಫ್ರೆಂಡ್ ಕಮ್ ಪತಿಯೊಂದಿಗೆ ಸಿಜ್ಲಿಂಗ್ ಸ್ಟೈಲ್ ನಲ್ಲಿ ಹೆಜ್ಜೆ ಹಾಕಿದರು. ಮದುವೆಯ ಬಳಿಕ ಇಬ್ಬರೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಒಬ್ಬರಿಗೊಬ್ಬರು ಲಿಪ್ ಲಾಕ್ ಕಿಸ್ ಕೊಟ್ಟಿದ್ದಾರೆ.
ಕುಟುಂಬಸ್ಥರ ಒಪ್ಪಿಗೆ ಮೆರೆಗೆ ನಟಿ ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಆಂಟನಿ ತಟ್ಟಿಲ್ ಕೀರ್ತಿ ಸುರೇಶ್ಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಆಂಟೊನಿ ತಟ್ಟಿಲ್ ಮೂಲತಃ ಕೇರಳದ ಕೊಚ್ಚಿಯವರು. ದುಬೈನಲ್ಲಿ ಇವರದ್ದು ಹಲವು ಬ್ಯುಸಿನೆಸ್ ಇದೆ. ಹುಟ್ಟಿದ್ದು ಕೇರಳದಲ್ಲಾದ್ರೂ ಬೆಳೆದಿದ್ದು ಮಾತ್ರ ಚೆನ್ನೈನಲ್ಲೇ. ಸದ್ಯ ಆಂಟೊನಿ ತಟ್ಟಿಲ್ ದುಬೈನಲ್ಲೆ ನೆಲೆಸಿದ್ದಾರೆ ಎನ್ನಲಾಗುತ್ತಿದೆ.