ನಮ್ಮ ದೈನಂದಿನ ಬಹುತೇಕ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ನೆರವಾಗುತ್ತದೆ. ಹೀಗೆ ನಿರಂತರ ಸ್ಮಾರ್ಟ್ ಫೋನ್ ಬಳಕೆ ಸಹಜವಾಗಿಯೇ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಹೀಗಾಗಿ, ಆಗಾಗ ಬ್ಯಾಟರಿ ಚಾರ್ಜ್ ಕೂಡಾ ಮಾಡುತ್ತಲೇ ಇರಬೇಕಾಗುತ್ತದೆ. ಹೀಗೆ ನಿರಂತರ ಬಳಕೆಯಿಂದ ಕೆಲವೊಮ್ಮೆ ಸ್ಮಾರ್ಟ್ಫೋನ್ನ ಸ್ಕ್ರೀನ್ನಲ್ಲಿ ಕೊಳಕು, ಧೂಳುಗಳು ಕಾಣಿಸಿಕೊಳ್ಳುತ್ತವೆ. ಬರೀ ಅಷ್ಟೇ ಅಲ್ಲ, ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳೂ ಸ್ಕ್ರೀನ್ ಮೇಲೆ ಕುಳಿತುಕೊಳ್ಳುತ್ತವೆ. ಹೀಗಾಗಿ ಸ್ಮಾರ್ಟ್ಫೋನ್ನ ಸ್ಕ್ರೀನ್ಗಳನ್ನು ಸ್ವಚ್ಛವಾಗಿಟ್ಟುಕೊಟ್ಟುಕೊಳ್ಳುವುದೂ ಬಹಳ ಅಗತ್ಯ. ಸ್ವಚ್ಛ ಸ್ಮಾರ್ಟ್ಫೋನ್ ಸ್ಕ್ರೀನ್ ಬರೀ ಡಿಸ್ಪ್ಲೇಯನ್ನು ಹೊಳೆಯುವಂತೆ ಮಾಡುವುದಿಲ್ಲ, ಇದು ನಮ್ಮ ನೈರ್ಮಲ್ಯಕ್ಕೂ ಅಗತ್ಯವಾಗಿದೆ.
ಆದರೆ, ಸ್ಮಾರ್ಟ್ಫೋನ್ಗಳ ಸ್ಕ್ರೀನ್ ಸ್ವಚ್ಛಗೊಳಿಸುವಾಗಲೂ ಕೆಲವೊಂದು ಸಂಗತಿಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಂತಹ ಕೆಲ ಪ್ರಮುಖ ಅಂಶಗಳ ಬಗ್ಗೆ ನಾವಿಲ್ಲಿ ನೋಡೋಣ.
ಮೈಕ್ರೋಫೈಬರ್ ಬಟ್ಟೆ : ಸ್ಮಾರ್ಟ್ಸ್ಕ್ರೀನ್ ಸ್ವಚ್ಛಗೊಳಿಸಲು ಈ ಬಟ್ಟೆಗಳು ಸೂಕ್ತ. ಮೈಕ್ರೋಫೈಬರ್ನ ಸೌಮ್ಯವಾದ ಫೈಬರ್ಗಳು ಪರದೆಯನ್ನು ಸ್ಕ್ರಾಚ್ ಮಾಡದೆಯೇ ಧೂಳು ಮತ್ತು ಬೆರಳಚ್ಚುಗಳನ್ನು ಪರಿಣಾಮಕಾರಿಯಾಗಿ ತೆಗೆಯುತ್ತವೆ.
ಡಿಸ್ಟಿಲ್ಡ್ ವಾಟರ್ : ನೀರಿನ ಬದಲು ಡಿಸ್ಟಿಲ್ಡ್ ವಾಟರ್ ಅನ್ನು ಬಳಸಬಹುದು. ನೀರಿನ ಬಳಕೆ ಖನಿಜಗಳ ಸಂಗ್ರಹಕ್ಕೆ ಕಾರಣವಾಗಬಹುದು, ಇದರಿಂದ ಗೆರೆಗಳು ಬೀಳಬಹುದು. ಡಿಸ್ಟಿಲ್ಡ್ ವಾಟರ್ ಸ್ಕ್ರೀನ್ ಮೇಲೆ ಶೇಷವನ್ನು ಬಿಡಬಹುದಾದ ಯಾವುದೇ ಖನಿಜಗಳು ಅಥವಾ ಕಲ್ಮಶಗಳನ್ನು ಹೊಂದಿರುವುದಿಲ್ಲ. ನಲ್ಲಿ ನೀರು ಅಥವಾ ಇತರ ರೀತಿಯ ದ್ರವ ಬಳಸುವುದಕ್ಕಿಂತ ಇದು ಉತ್ತಮ.
ಕಠಿಣ ರಾಸಾಯನಿಕಗಳನ್ನು ತಪ್ಪಿಸಿ : ವಿಂಡೋ ಕ್ಲೀನರ್, ಬ್ಲೀಚ್ ಮತ್ತು ಇತರ ಕಠಿಣ ರಾಸಾಯನಿಕಗಳನ್ನು ಬಳಸಬೇಡಿ. ಇವು ನಿಮ್ಮ ಸ್ಕ್ರೀನ್ಗೆ ಹಾನಿ ತರಬಹುದು. ಜೊತೆಗೆ ನಿಮ್ಮ ವಾರಂಟಿಯನ್ನೂ ಹಾಳೆಸಬಹುದು
ಧೂಳು ಮತ್ತು ಕೊಳೆಗಳನ್ನು ತೆಗೆದುಹಾಕಲು ಒಣ ಮೈಕ್ರೋಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸುವುದನ್ನು ಆರಂಭಿಸಿ. ಮೃದುವಾದ ವೃತ್ತಾಕಾರವಾಗಿ ಒರೆಸಲು ಆರಂಭಿಸಿ ಹಾಗೂ ತುಂಬಾ ಗಟ್ಟಿಯಾಗಿ ಒತ್ತುವುದನ್ನು ತಪ್ಪಿಸಿ.