ಕಲಬುರ್ಗಿ;- ಕೆಇಎ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆರ್ಡಿ ಪಾಟೀಲ್ಗೆ ಕೈ ಶಾಸಕರು, ಮಂತ್ರಿಗಳು ನೆರವು ನೀಡುತ್ತಿದ್ದಾರೆ ಎಂದು B.Y.ವಿಜಯೇಂದ್ರ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಇದ್ದಾಗ ಪಿಎಸ್ಐ ಪರೀಕ್ಷೆ ಅಕ್ರಮದ ಬಗ್ಗೆ ಕಾಂಗ್ರೆಸ್ ಸತತವಾಗಿ ಆರೋಪ ಮಾಡಿತ್ತು. ಈಗ ಪ್ರಕರಣದ ಆರೋಪಿ ಆರ್ಡಿ ಪಾಟೀಲ್ಗೆ ಕಾಂಗ್ರೆಸ್ ಶಾಸಕರು, ಮಂತ್ರಿಗಳೇ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇನ್ನು ಎಲ್ಲಾ ಗೊತ್ತಿದ್ದರೂ ಪೋಲೀಸರಿಗೆ ಯಾಕೆ ಹಿಡಿಯಲು ಆಗುತ್ತಿಲ್ಲ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.