ಕಲಬುರಗಿ:- ಕಲಬುರಗಿಯಲ್ಲಿ ನಡೆದ KEA ಅಕ್ರಮ ಪ್ರಕರಣದ ತನಿಖೆ ಸಿಐಡಿ ಕೊಡುವ ವಿಚಾರ ಸದ್ಯಕ್ಕಿಲ್ಲ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಅಕ್ರಮ ಪ್ರಕರಣದ ತನಿಖೆ ಚುರುಕಾಗಿ ನಡೀತಿದೆ ಮೊದಲು ಪ್ರಾಥಮಿಕ ತನಿಖೆ ವರದಿ ಬರಲಿ ನಂತ್ರ ಸಿಐಡಿಗೆ ಕೊಡೋ ವಿಚಾರ ಮಾಡೋಣ ಅಂದ್ರು. ಇದೇವೇಳೆ ಆರೋಪಿ RD ಪಾಟೀಲ್ ತಪ್ಪಿಕೊಳ್ಳಲು ಯಾರೇ ಸಹಕಾರ ಮಾಡಿದ್ರೂ ಅಂತಹವರ ವಿರುದ್ಧ ಕ್ರಮ ಖಂಡಿತ ಅಂತ ಹೇಳಿದ್ರು.ತನಿಖೆ ವೇಳೆ ಒಂದು ಮೊಬೈಲ್ ಪತ್ತೆಯಾಗಿದೆ ಆದ್ರೆ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಆ ಮೊಬೈಲ್ ಯಾರದ್ದು ಅಂತ ಹೇಳೋದಿಲ್ಲ ಅಂದ್ರು.