ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ ಅಪಾರ್ಟ್ಮೆಂಟ್ನಿಂದ ತಪ್ಪಿಸಿ ಕೊಂಡಿದ್ದ ಹಿನ್ನೆಲೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಫಜಲಪುರ ಸಿಪಿಐ ಪಂಡಿತ್ ಸಗರ್ ಅಮಾನತ್ತು ಮಾಡಿ ಕಲಬುರಗಿ ಐಜಿಪಿ ಅಯ್ ಹಿಲೋರಿ ಆದೇಶ ಹೊರಡಿಸಿದ್ದಾರೆ. ನವೆಂಬರ್ 7 ರಂದು ಕಲಬುರಗಿ ನಗರದ ವರ್ಧಾ ಲೇಔಟ್ ನ ಅಪಾರ್ಟ್ಮೆಂಟ್ನಿಂದ ಕಾಂಪೌಂಡ್ ಜಿಗಿದು ಎಸ್ಕೇಪ್ ಆಗಿದ್ದ ಆರ್ ಡಿ ಪಾಟೀಲ್.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಪ್ರಕರಣದ ಕಿಂಗ್ಪಿನ್ ಅಪಾರ್ಟ್ಮೆಂಟ್ನಲ್ಲಿದ್ದಾನೆಂಬ ಮಾಹಿತಿ ಮುಂಚಿತವಾಗಿ ಸಿಕ್ಕರೂ ಬಂಧನಕ್ಕೆ ತೆರಳಲು ಸಿಪಿಐ ಪಂಡಿತ್ ಸಗರ್ ನಿಧಾನ ಮಾಡಿದ ಆರೋಪ. ಕಣ್ಣೆದುರಲ್ಲೇ ಆರೋಪಿ ತಪ್ಪಿಸಿಕೊಂಡು ಹೋದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ. ಅದಾದ ಬಳಿಕ ಆರ್ಡಿ ಪಾಟೀಲ್ ಬಳಸಿದ್ದ ಕಾರಿನ ಜಾಡು ಹಿಡಿದು ಆರೋಪಿಯ ಬೆನ್ನಹತ್ತಿದ್ದ ಪೊಲೀಸ್ ಕೊನೆಗೆ ಮಹಾರಾಷ್ಟ್ರದ ಚಿಕ್ಕಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಆರ್ಡಿ ಪಾಟೀಲ್ ಬಂಧಿಸಿತ್ತು