ಸರ್ಕಾರದ ಭೂ ಸ್ವಾದೀನ ಪ್ರಕ್ರಿಯೆಯನ್ನು ವಿರೋಧಿಸಿ ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವವರ ಕೆ ಡಿ ಪಿ ಸಭೆಯಲ್ಲಿ ರೈತರು ಸಚಿವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ರೈತರಿಂದ ಪ್ರತಿಭಟನೆ ನಡೆದಿದ್ದು,ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರಿಂದ ಪ್ರತಿಭಟನೆ ನಡೆದಿದೆ..
ಅಂದಹಾಗೆ ಸರ್ಕಾರದ ಕೆಐ ಡಿ ಬಿ ಯ ಭೂ ಸ್ವಾದಿನಾ ಪ್ರಕ್ರಿಯೆಯ ಎರಡನೇ ಹಂತದಲ್ಲಿ ಸುಮಾರು 1777ಎಕರೆ ಜಾಗವನ್ನು ಸ್ವಾದಿನ ಮಾಡುವುದಕ್ಕೆ ಮುಂದಾಗಿದ್ದು ಇದರ ವಿರುದ್ಧ 13 ಹಳ್ಳಿಯ ರೈತರು ಸುಮಾರು 975 ದಿನಗಳಿಂದ ಹೋರಾಟ ನಡೆಸುತ್ತಿದ್ದರು.
ಸರ್ಕಾರ ಭೂ ಸ್ವಾದಿನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಸಚಿವರ ಬಳಿ ಸಾಕಷ್ಟು ಬಾರಿ ಸಭೆ ನಡೆಸಿದರು ಪ್ರಯೋಜನವಾಗಿಲ್ಲ ಅಂತ ಸಚಿವರ ನಿರ್ಲಕ್ಷ ಖಂಡಿಸಿ ಇಂದು ಸಚಿವರ ಹಾಗೂ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಹಾಕಿದ್ದಾರೆ.. ಇನ್ನು ಸರ್ಕಾರ ನಮ್ಮ ಕಡೆ ಗಮನ ಹರಿಸದೆ ಇದ್ದಲ್ಲಿ ನಾವು ಉಗ್ರ ಹೋರಾಟ ಮಾಡುವ ಎಚ್ಚರಿಕೆ ಯನ್ನು ರೈತರು ನೀಡಿದ್ದಾರೆ.