ಹುಬ್ಬಳ್ಳಿ: ಇಂಜಿನಿಯರಿಂಗ್ ಕೋರ್ಸ್ ಆಕಾಂಕ್ಷಿಗಳಾದ ಪ್ರಥಮ ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳಿಗಾಗಿ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್ ಎಲ್) ವತಿಯಿಂದ ಕೆಸಿಇಟಿ ಪ್ಲಸ್ (ಕರ್ನಾಟಕ ಕಾಮನ್ ಎಂಟ್ರನ್ಸ್ ಟೆಸ್ಟ್) ನೂತನ ಕೋರ್ಸ್ ಪರಿಚಯಿಸಲಾಗಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಕಾಶ್ ಸಂಸ್ಥೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಶ ಕೆ. ಅವರು, ಪರೀಕ್ಷೆ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಆಕಾಶ್, ಜೆಇಇ ಮೇನ್ಸ್ ತರಬೇತಿಗೆ ಸಮನಾದ ತರಬೇತಿಯನ್ನು ಕೆಸಿಇಟಿ ಪ್ಲಸ್ ನಲ್ಲಿ ನೀಡಲಾಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಪಡೆದು ಅಗತ್ಯ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.
ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?
ಇಂಜಿನಿಯರಿಂಗ್ ಕಾಲೇಜುಗಳು ನಡೆಸುವ ಪ್ರಾದೇಶಿಕ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ (ಮೇನ್) ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಈ ತರಬೇತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪದವಿಪೂರ್ವ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಈ ತರಬೇತಿ ಪ್ರಾರಂಭವಾಗುತ್ತವೆ ಎಂದು ಹೇಳಿದರು.
10ನೇ ತರಗತಿಯಿಂದ 11ನೇ ತರಗತಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ, 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 2025ರಿಂದ ಮೇ 2025ರ ನಡುವೆ ಹಾಗೂ ಫಲಿತಾಂಶಗಳು ಘೋಷಣೆಯಾದ ನಂತರ ಜೂನ್- ಜುಲೈ 2025ರಲ್ಲಿ ಕೆಸಿಇಟಿ ಮತ್ತು ಜೆಇಇ (ಮೇನ್) 2027 (ಸಿಬಿಎಸ್ಇ/ ಪಿಯುಸಿ) ಪ್ರವೇಶ ಪರೀಕ್ಷೆಗಳಿಗಾಗಿ ಒಂದು ಹಾಗೂ ಎರಡು ವರ್ಷದ ಇಂಟಿಗ್ರೇಟೆಡ್ ತರಗತಿ ಕೋರ್ಸ್ ಗಳನ್ನು ಸಹ ನಡೆಸಲಾಗುತ್ತಿದೆ.
ಸತತವಾಗಿ ಮೂರು ವರ್ಷಗಳ ಕಾಲ ಕೆಸಿಇಟಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಹೆಗ್ಗಳಿಕೆಗೆ ಆಕಾಶ್ ಪಾತ್ರವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು (ಕೆಸಿಇಟಿ) ಇಂಜಿನಿಯರಿಂಗ್, ತಂತ್ರಜ್ಞಾನ, ವಾಸ್ತುಶಿಲ್ಪ, ಬ್ಯಾಚಲರ್ ಆಫ್ ಯೋಗ -ನ್ಯಾಚುರೋಪತಿ (ಬಿಎನ್ ವೈಎಸ್), ಬಿ.ಎಸ್ಸಿ ನಸಿರ್ಂಗ್, ಬ್ಯಾಚಲರ್ ಆಫ್ ವೆರ್ಟನರಿ ಸೈನ್ಸ್ -ಆನಿಮಲ್ ಹಸ್ಟಂಡ್ರಿ (ಬಿವಿಎಸ್ಸಿ – ಎ ಎಚ್)ಕೋರ್ಸ್ ಗಳ ಪ್ರವೇಶಕ್ಕೆ ಇದು ಹೆದ್ದಾರಿಯಾಗಿದೆ.
ಕೆಸಿಇಟಿ ಪ್ಲಸ್ ಪಠ್ಯಕ್ರಮವನ್ನು ಜೆಇಇ ಪಠ್ಯಗಳನ್ನು ಆಧರಿಸಿ ಸಿದ್ಧಪಡಿಸಲಾಗುವುದು. ಇಂಗ್ಲಿಷ್ ನಲ್ಲಿ ಅಧ್ಯಯನ ಸಾಮಗ್ರಿ ಒದಗಿಸಲಾಗುವುದು, ಎರಡು ವರ್ಷದ ಪಿಯು ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್ ಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಏರಿಯಾ ಸೇಲ್ಸ್ ಹೆಡ್ ಅನಿಲಕುಮಾರ ಎಚ್, ಬ್ರಾಂಚ್ ಹೆಡ್ ಮಾರ್ತಾ ಎಂ, ಇದ್ದರು.