ಕಲಘಟಗಿ: ‘ಸಹಕಾರ ಸಂಘಗಳು ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಸಾಲ ನೀಡುವ ಮೂಲಕ ಅವರ ಏಳಿಗೆಗೆ ಶ್ರಮಿಸುತ್ತಿವೆ’ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ಹೇಳಿದರು. ಪಟ್ಟಣದ ಹನ್ನೆರಡು ಮಠದ ಸಭಾ- ಭವನದಲ್ಲಿ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ತಾಲ್ಲೂಕಿನ ಸಹಕಾರ ಸಂಸ್ಥೆಗಳ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ 71ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷ ಭೇದ ಮರೆತು ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ’ ಎಂದರು.
ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಮಾತನಾಡಿ, ‘ಹಾಲು ಉತ್ಪಾದಕರ ಸಹಕಾರ ಹಾಗೂ ಕೆಸಿಸಿ ಬ್ಯಾಂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಕಾರದಿಂದ ಗ್ರಾಮೀಣ ಜನರ ಬದುಕು ಹಸನಾಗಿಸುತ್ತಿವೆ. ಮೂರು ಜಿಲ್ಲೆ ಒಳಗೊಂಡ ಹಾಲು ಉತ್ಪಾದಕರ ಸಹಕಾರ ಸಂಘವು 1.80 ಲಕ್ಷ ಕಲಘಟಗಿ ಪಟ್ಟಣದಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕೆಎಂಎಫ್ ಅಧ್ಯಕ್ಷ ಶಂಕರ ಮುಗದ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ಉದ್ಘಾಟಿಸಿದರುಹಂತಕ್ಕೆ ತಲುಪಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು.ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಬಿತ್ತನೆ ಬೀಜಗಳ ವಿತರಿಸುವ ಕಾರ್ಯಕ್ರಮ ಪ್ರಾರಂಭ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿ- ದೆ’ ಎಂದರು.
ನಿಮಗೆ ಗೊತ್ತೆ..? ಈ ಬೀಜ ನೆನೆಸಿಟ್ಟ ನೀರು ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!
ಸಹಕಾರ ಸಂಘದ ಧ್ವಜಾರೋಹಣ ನೆರೆವೇರಿಸಿ, ಸಹಕಾರ ಸಂಘದ ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ಶಂಕರಪ್ಪ ರಾಯನಾಳ ಅಧ್ಯಕ್ಷತೆ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಉಮೇಶ ಹೇಬಸೂರ, ಕೆಎಂಎಫ್ ನಿರ್ದೇಶಕಿ ಗೀತಾ ಮರಲಿಂಗಣ್ಣವರ, ತಡಸಮಠ, ಸಹಕಾರ ಸಂಘಗಳ ಸಿಇಒ ಸವಿತಾ ಕರ್ಲಗೇರಿ, ಕೆಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀತಾ ಸಿದ್ದರಾಮ, ಎಸ್. ಆರ್. ಪಾಟೀಲ, ಎಸ್.ವಿ. ತಡಸಮಠ ಮಾತನಾಡಿದರು. ಹರಿಶಂಕರಮಠ, ನರೇಶ್ ಮಲೆನಾಡು, ಗಂಗಾಧರ ಚಿಕ್ಕಮಠ, ಬಿ.ವೈ. ಪಾಟೀಲ, ಉಳವಪ್ಪ ಬಳಿಗೇರ, ಬಿ.ಐ. ದೇಸಾಯಿ, ನಿಜಲಿಂಗಪ್ಪ ಉಪಸ್ಥಿತರಿದ್ದರು