ಬೆಂಗಳೂರು: ಕ್ರಿಕೆಟಿಗ ಕೆಸಿ ಕಾರಿಯಪ್ಪ ಮೇಲೆ ಗಂಭೀರ ಆರೋಪ ಮಾಡಿದ ಪ್ರೇಯಸಿ ಪ್ರಕರಣ ಕಾರಿಯಪ್ಪಗೆ ಮುಳುವಾಗುವ ಲಕ್ಷಣ ಗೋಚರಿಸಿದೆ. ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿರೋ ಕಾರಿಯಪ್ಪರ ಕ್ರಿಕೆಟ್ ಕೆರಿಯರ್ ಪ್ರೇಯಸಿಯ ಆರೋಪಗಳು ಅಡ್ಡಿಯಾಗಿದೆ.. ಇತ್ತ ಕೌಟಂರ್ ದೂರುಗಳತ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕ್ರಿಕೆಟಿಗ ಕೆಸಿ ಕಾರಿಯಪ್ಪ ಪ್ರೇಮ ಪುರಾಣ ಪ್ರಕರಣದಲ್ಲಿ ಕಾರಿಯಪ್ಪಗೆ ಸಂಕಷ್ಟ ಎದರುರಾಗಿದೆ.ಯಾವುದೇ ಕ್ಷಣದಲ್ಲೂ ಬೇಕಾದ್ರು ಕೆಸಿ ಕಾರಿಯಪ್ಪಗೆ “NADA” ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. National anti doping agencyಯು ಕರ್ನಾಟಕ ರಣಜಿ ತಂಡದ ಆಟಗಾರನಾಗಿರುವ ಕೆಸಿ ಕಾರಿಯಪ್ಪರನ್ನ ಯಾವುದೇ ಕ್ಷಣದಲ್ಲಾದ್ರು Nada ಪರೀಕ್ಷೆಗೆ ಒಳಪಡಿಸಬಹುದು. ಕಾರಿಯಪ್ಪ ಗಾಂಜಾ ಸೇವನೆ ಮಾಡ್ತಾರೆ ಎಂದು ಮಾಜಿ ಪ್ರೇಯಸಿ ದಿಶಾ ಗಂಭೀರವಾಗಿ ಆರೋಪ ಮಾಡಿದ್ದಾರೆ. ಮ್ಯಾಚ್ ಮುಗಿದಾಗ ರಿಕ್ರಿಯೇಷನ್ ಗಾಗಿ ಕಾರಿಯಪ್ಪ ಗಾಂಜ ತಗೋತಾರೆ ತನ್ನ ಕಣ್ಣಮುಂದೇಯೆ ಗಾಂಜ ಸೇವನೆ ಮಾಡಿದ್ದಾರೆ ಎಂದು ದಿಶಾ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ರು. ಈ ಹಿನ್ನೆಲೆ NADAಯಾವೂದೇ ಕ್ಷಣದಲ್ಲಾದ್ರು ವಿಚಾರಣೆ ನಡೆಸಿ ಪರೀಕ್ಷಿಸಬಹುದು.
ಭಾರತೀಯ ಆಟಗಾರರನ್ನ ಯಾವುದೇ ಕ್ಷಣದಲ್ಲಾದರೂ ಪರೀಕ್ಷೆಗೆ ಒಳಪಡಿಸಬಹುದಾದ ಅಧಿಕಾರ NADA ಗೆ ಇದೆ.
ಈ ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ಕಾರಿಯಪ್ಪಗೆ NADA ಸಂಕಷ್ಟ ಎದುರಾಗಬಹುದು ಎನ್ನಲಾಗುತ್ತಿದೆ.
ಇನ್ನು ಬಗಲುಗುಂಟೆಯಲ್ಲಿ ದಿಶಾ ವಿರುದ್ದ ಕೆಸಿ ಕಾರಿಯಪ್ಪ ದೂರನ್ನು ನೀಡಿದ್ದಾರೆ. ಇದಕ್ಕೆ ಕೌಂಟರ್ ಎಂಬಂತೆ ದಿಶಾ ಸಹ ಆರ್ ಟಿನಗರದಲ್ಲಿ ದೂರನ್ನು ನೀಡಿದ್ದರು. ದಿಶಾರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗಿ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸುವಂತೆ ಆರ್ ಟಿನಗರ ಪೊಲೀಸರು ನೋಟೀಸ್ ನೀಡಿದ್ದಾರೆ. ಇವರಿಬ್ಬರ ಆರೋಪದ ನಡುವೆ ಕೆಲವು ವಿಡಿಯೋಗಳು ಬಹಿರಂಗವಾಗಿದ್ದು ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸದ್ಯ ಕ್ರಿಕೆಟಿಗ ಕೆಸಿ ಕಾರಿಯಪ್ಪ ಭವಿಷ್ಯಕ್ಕೆ ಪ್ರಕರಣ ಹುರುಳಾಗುತ್ತಿದ್ದರೆ. ಮಾಡೆಲ್ ದಿಶಾ ತಾನು ಕೊಟ್ಟ ದೂರಿಗೆ ಸಾಕ್ಷ್ಯಾಧಾರವನ್ನು ಒದಗಿಸಬೇಕಿದೆ. ಅದೇನಾದ್ರು ಕುಳಿತು ಬಗೆಹರಿಸಿಕೊಳ್ಳಬೇಕಾದ ವಿಚಾರದಲ್ಲಿ ಇಬ್ಬರು ಹಾದಿಬೀದಿ ಮಾತಿಗೆ ಸಿಲುಕುತ್ತಿರೋದು ವಿಪರ್ಯಾಸವೆ ಸರಿ.