ಬೆಂಗಳೂರು: ಅದು 50ವರ್ಷದಿಂದ ಸತತವಾಗಿ ಚಲನಚಿತ್ರಗಳ ಮೂಲಕ ಜನರನ್ನ ರಂಜಿಸುತ್ತಿದ್ದ ಥಿಯೇಟರ್, ಈಗಷ್ಟೇ ಸುವರ್ಣ ಸಂಭ್ರಮವನ್ನು ಕೂಡ ಆಚರಿಸಿಕೊಂಡಿತ್ತು. ಆದರೆ ಇದೀಗಾ ಆ ಚಿತ್ರಮಂದಿರ ಇತಿಹಾಸ ಪುಟ ಸೇರುತ್ತಿದೆ.ಹಾಗಾದರೆ ಯಾವುದದು ಥಿಯೇಟರ್ ಅಂತೀರಾ ಈ ಸ್ಟೋರಿ ನೋಡಿ. ಹೌದು..ಒಂದು ಸಮಯದಲ್ಲಿ ಅಲ್ಲಿ ಸಾವಿರಾರು ಜನ ಒಮ್ಮೆಲೆ ಕೂತು ರಿಲೀಸ್ ಆಗ್ತಾ ಇದ್ದ ಚಲನಚಿತ್ರಗಳನ್ನು ನೋಡುತ್ತಿದ್ದ ಜಾಗ ಕಪಾಲಿ ಥಿಯೇಟರ್ ಬಿಟ್ರೆ ಅತಿ ಹೆಚ್ಚಿನ ಸೀಟ್ ಅನ್ನು ಹೊಂದಿದ್ದ ಕಾವೇರಿ ಥಿಯೇಟರ್ ಪ್ರತಿಯೊಬ್ಬರಿಗೂ ಕೂಡ ಗೊತ್ತಿರುತ್ತೆ. ಆದರೆ ಇದೀಗಾ ಆ ಕಾವೇರಿ ಥಿಯೇಟರ್ ಇತಿಹಾಸದ ಪುಟ ಸೇರುತಿದೆ.
ಹೌದು..1974 ರಿಂದ 2024 ಸತತವಾಗಿ 50ವರ್ಷ ಜನರನ್ನ ರಂಜಿಸಿಕೊಂಡು ಬಂದ ಪ್ಯಾಲೇಸ್ ಗುಟ್ಟಲ್ಲಿ ಬಳಿಯ ಕಾವೇರಿ ಥಿಯೇಟರ್ ಇನ್ನು ನೆನಪು ಮಾತ್ರ…1974 ಜನವರಿ 11ರಂದು ಮೊದಲ ಶೋ ಆಗಿ ಅಣ್ಣಾವ್ರ ಬಂಗಾರದ ಪಂಜರ ಚಲನಚಿತ್ರ ತೆರೆಕಂಡು ಕೊನೆಯದಾಗಿ ಏಪ್ರಿಲ್ 19ರಂದು ಹಿಂದಿಯ ಮೈದಾನ ಚಿತ್ರದವರೆಗೂ ಕೂಡ ಕಾವೇರಿ ಥಿಯೇಟರ್ ನಲ್ಲಿ ಅದೆಷ್ಟು ಚಿತ್ರ ಪ್ರೇಮಿಗಳು ಪ್ರತಿನಿತ್ಯ ಬಂದು ಚಲನಚಿತ್ರವನ್ನು ವೀಕ್ಷಿಸಿ ಹೋಗುತ್ತಿದ್ದರು.
ಮೆಜೆಸ್ಟಿಕ್ನ ಕಪಾಲಿ ಚಿತ್ರಮಂದಿರದ ನಂತರ ಅತಿ ಹೆಚ್ಚು ಸೀಟಿಂಗ್ ವ್ಯವಸ್ಥೆ ಇದ್ದ ಈ ಚಿತ್ರಮಂದಿರ ಆರಂಭವಾಗಿದ್ದಾಗ 1300ರಷ್ಟು ಸೀಟುಗಳ ವ್ಯವಸ್ಥೆ ಇತ್ತು, ಜೊತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ಇದೂ ಒಂದಾಗಿತ್ತು…ಕೇವಲ ಕನ್ನಡವಷ್ಟೇ ಅಲ್ಲದೇ ಎಲ್ಲಾ ಭಾಷೆಗಳ ಸಿನಿಮಾದ ಪ್ರದರ್ಶನ ನಡೆಯುತ್ತಿದ್ದು, ಅನೇಕ ಸಿನಿಪ್ರೇಮಿಗಳಿಗೆ ಕಾವೇರಿ ಥಿಯೇಟರ್ ಒಂದು ರೀತಿಯಲ್ಲಿ ಫೇವರೇಟ್ ಪ್ಲೇಸ್ ಆಗಿತ್ತು..
ಇನ್ನೂ..ಕೆಲ ತಿಂಗಳ ಹಿಂದೇ ಅಷ್ಟೇ ಗೋಲ್ಡನ್ ಜ್ಯುಬಿಲಿ ಸಂಭ್ರಮ ಆಚರಿಸಿಕೊಂಡಿದ್ದ ಕಾವೇರಿ ಥಿಯೇಟರ್.., ಕೊವಿಡ್ ನಂತರ ಕಲೆಕ್ಷನ್ನಲ್ಲಿ ಭಾರೀ ಇಳಿತ ಕಂಡಿತ್ತು…ಅದರಲ್ಲೂ ಓಟಿಟಿ, ಮಲಿಪ್ಲೆಕ್ನ ಕರಿನೆರಳು ಕೂಡ ಚಿತ್ರಮಂದಿರದ ಮೇಲೆ ಬೀರಿದ್ದು.., ಬಾಕ್ಸ್ ಆಫೀಸ್ನ ಕಲೆಕ್ಷನ್ ತುಂಬಾ ಕಡಿಮೆಯಾಗಿತ್ತು. ಇನ್ನು ಮುಂದೆ ಚಿತ್ರಮಂದಿರ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಚಿತ್ರಮಂದಿರವನ್ನ ಮುಚ್ವಿ. ಈಗ ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ..
ಈಗಾಗಲೇ ಕಾವೇರಿ ಥಿಯೇಟರ್ನ ಡೆಮಾಲಿಷನ್ ಕಾರ್ಯ ಶುರುವಾಗಿದ್ದು.., ಇನ್ನು ಕೆಲ ವರ್ಷಗಳೇ ಸುಮಾರು 20 ಅಂತಸ್ತಿನ ಕಟ್ಟಡ ತಲೆಎತ್ತಲಿದೆ. ಒಟ್ನಲ್ಲಿ 50 ವರ್ಷಗಳಿಂದ ಹಿಟ್ ಮೂವಿಗಳ ಪ್ರದರ್ಶನದಿಂದ ಜನರನ್ನ ರಂಜಿಸಿದ್ದ ಗುಟ್ಟಳ್ಳಿಯ ಕಾವೇರಿ ಥಿಯೇಟರ್, ಒಟಿಟಿ ಹಾಗೂ ಮಲ್ಲಿಪ್ಲೆಕ್ಸ್ಗಳ ಹಾವಳಿಯಿಂದ ಶಾಶ್ವತವಾಗಿ ಬಾಗಿಲು ಮುಚ್ಚುತ್ತಿದ್ದು… ಕಾವೇರಿ ಥಿಯೇಟರ್ ಇನ್ನೂ ನೆನಪು ಮಾತ್ರ.