ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ, ಕಳೆದ 72 ದಿನಗಳಿಂದ ಧರಣಿ ನಡೆಸುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ರೈತ ಸಂಘಟನೆ,
ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ, ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ರೈತರನ್ನು ರಕ್ಷಣೆ ಮಾಡದ ರಾಜ್ಯದ ಸಂಸದರು, ರಾಜೀನಾಮೆ ಕೊಡಲಿ. ಕೇಂದ್ರದಲ್ಲಿ ಕಾವೇರಿ ನೀರಿಗಾಗಿ ಧ್ವನಿ ಎತ್ತದ ಸಂಸದರ ಅವಶ್ಯಕತೆ ಇಲ್ಲ. ಸರ್ಕಾರ ಕೂಡಲೇ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ರೈತರು ಆಗ್ರಹಿಸಿದರು.