ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅಪ್ಪಟ ಕನ್ನಡ ಸೊಗಡಿನ ‘ಕಾಟೇರ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ಮತ್ತೊಮ್ಮೆ ಡಿ ಬಾಸ್ ಗೆದ್ದು ಬೀಗಿದ್ದಾರೆ.
ಡಿಸೆಂಬರ್ 29ರಂದು ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡ ‘ಕಾಟೇರ’ ಸೂಪರ್ ಡೂಪರ್ ಹಿಟ್ ಆಗಿದೆ. ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದೆ.
ವೀಕೆಂಡ್ ಹೊರತುಪಡಿಸಿ ವಾರದ ದಿನಗಳಲ್ಲೂ ‘ಕಾಟೇರ’ ಒಳ್ಳೆಯ ಗಳಿಕೆ ಮಾಡುತ್ತಿದೆ. ಕೇವಲ ಒಂದೇ ವಾರಕ್ಕೆ ಬರೋಬ್ಬರಿ 104 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಕುರಿತು ದರ್ಶನ್ ಆಪ್ತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಮತ್ತು ಕರುನಾಡೆ ಮೆಚ್ಚಿದ ನಮ್ಮ ‘ಕಾಟೇರ’ ಕೇವಲ ಒಂದು ವಾರದಲ್ಲಿ 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿದೆ. 104 ಕೋಟಿಗೂ ಅಧಿಕ ಹಣವನ್ನು ಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ಸ್ಥಾಪಿಸಿ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯದಾದ್ಯಂತ ಅಮೋಘ ಗಳಿಕೆಯೊಂದಿಗೆ ಮುನ್ನುಗ್ಗುತ್ತಿರುವ ಬ್ಲಾಕ್ ಬಸ್ಟರ್ ಹಿಟ್ ‘ಕಾಟೇರ’ ಚಿತ್ರ ಹೊರದೇಶಗಳಲ್ಲಿ ತೆರೆಕಾಣುತ್ತಿದೆ.
‘ಕಾಟೇರ’ ಏಳು ದಿನದ ಕಲೆಕ್ಷನ್
- ಡಿಸೆಂಬರ್ 29 : 19.79 ಕೋಟಿ
- ಡಿಸೆಂಬರ್ 30 : 17.35 ಕೋಟಿ
- ಡಿಸೆಂಬರ್ 31 : 20.94 ಕೋಟಿ
- ಜನವರಿ 1 : 18.26 ಕೋಟಿ
- ಜನವರಿ 2 : 9.24 ಕೋಟಿ
- ಜನವರಿ 3 : 9.78 ಕೋಟಿ
- ಜನವರಿ 4 : 9.52 ಕೋಟಿ