ಧಾರವಾಡ: ಅಭಿಮಾನಿಗಳ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹು ನಿರೀಕ್ಷಿತ ಚಿತ್ರ ಇಂದು ವರ್ಲ್ಡ್ ವೈಡ್ ರೀಲಿಸಾಗಿದ್ದು, ಪೇಡಾ ನಗರಿ ಧಾರವಾಡದಲ್ಲಿ ದಾಸನ ಅಭಿಮಾನಿಗಳು ಡಿಜೆ ಹಚ್ಚಿ ಕಾಟೇರವನ್ನು ವಿಜೃಂಭಣೆಯಿಂದ ಸ್ವಾಗತಿಸಿದರು. ಕಾಟೇರಾ ಮೊದಲ ಶೋ ಸೌಂಡ್ ಜೋರಾಗಿದೆ. ನಗರದ ಎರಡು ಥಿಯೇಟರ್ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಶ್ರಿನಿವಾಸ್ ಹಾಗೂ ವಿಜಯ ಚಿತ್ರಮಂದಿರದಲ್ಲಿ ಕಾಟೇರಾ ಪ್ರದರ್ಶನ ಕಾಣುತ್ತಿದ್ದು, ಥಿಯೇಟರ್ ಮುಂದೆ ಅಭಿಮಾನಿಗಳ ದಾಸ್ನ ಕಟೌಟ ರಾರಾಜಿಸುತ್ತಿವೆ.
ಪಟಾಕಿ ಸದ್ದು ಕೂಡಾ ಥಿಯೇಟರ್ ಮುಂದೆ ಹೆಚ್ಚಾಗಿದ್ದು, ಎರಡು ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳ ಬ್ಯಾನರಗಳು ರಾರಾಜಿಸುತ್ತಿವೆ. ಇನ್ನೂ ಚಿತ್ರದ ಮೊದಲ ಶೋ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದಾಸನ ಫ್ಯಾನ್ಸ್ಗಳು ಚಿತ್ರಮಂದಿರ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಡಿ ಬಾಸ್ ಘೋಷಣೆಗುತ್ತಾ ಸಂಭ್ರಮಿಸುತ್ತಿದ್ದಾರೆ. ಅಷ್ಟೇಯಲ್ಲದೆ ಹಲವು ಅಭಿಮಾನಿಗಳು ತಮ್ಮದೆಯಾ ರೀತಿಯಲ್ಲಿ ಕಾಟೇರಾ ಸಂಭ್ರಮದಲ್ಲಿ ತೊಡಿಗಿದ್ದಾರೆ.