ಬೆಂಗಳೂರು:- ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಪ್ರತಿಕ್ರಿಯೆ ನೀಡಿದ್ದಾರೆ.
Red Lipstick Ban: ಕೆಂಪು ಲಿಪ್ಸ್ಟಿಕ್ ಬ್ಯಾನ್.. ಈ ದೇಶದಲ್ಲಿ ನಿಯಮ ಮೀರಿದ್ರೆ ಭಾರೀ ದಂಡ..!
ಈ ಸಂಬಂಧ ಮಾತನಾಡಿದ ಅವರು,ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ. ಸೀರೆಯಿಂದ ಫ್ಯಾನ್ಗೆ ಹ್ಯಾಂಗ್ ಮಾಡ್ಕೊಂಡು ಆತ್ಮಹತ್ಯೆ ಆಗಿದೆ. ಇದರ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಅಂತಾ ಬರೆದಿರುವುದು ಗೊತ್ತಾಗಿದೆ. ಅದನ್ನ ಅವರೇ ಬರೆದಿದ್ದಾರಾ ಅಂತಾ ಪರಿಶೀಲನೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ತನಿಖೆ ಬಳಿಕ ವಿಚಾರ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇನ್ನೂ ಕೆಎಎಸ್ ಅಧಿಕಾರಿಯ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸಂಜಯ್ನಗರದ ನಿವಾಸದಲ್ಲಿ ನಡೆದಿದೆ. ಚೈತ್ರಾಗೌಡ ಮೃತ ಮಹಿಳೆ. ವೃತ್ತಿಯಲ್ಲಿ ವಕೀಲರಾಗಿದ್ದರು. ಮನೆಯಲ್ಲಿ ಫ್ಯಾನ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆ ಆಗಿದೆ. ಸದ್ಯ ಘಟನಾ ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮನೆಯಲ್ಲಿ 3 ತಿಂಗಳ ಹಿಂದೆ ಬರೆದಿಟ್ಟಿದ್ದ ನೋಟ್ ಪತ್ತೆ ಆಗಿದೆ. ಇದೇ ಮಾ.11ರಂದು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ನನ್ನ ಗಂಡ ಒಳ್ಳೆಯವರು, ಜೀವನ ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನಿಸಿದೆ ಆಗಲಿಲ್ಲ, ಹಾಗಾಗಿ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ. ಮಗು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದ್ರೂ ನನ್ನ ಜೀವನ ಅಂತ್ಯ ಮಾಡುತ್ತಿದ್ದೇನೆ ಎಂದು ಮನೆಯಲ್ಲಿ 3 ತಿಂಗಳ ಹಿಂದೆ ಬರೆದಿಟ್ಟಿದ್ದ ನೋಟ್ ಪತ್ತೆ ಆಗಿದೆ.