ಬಿಗ್ ಬಾಸ್ ಶುರುವಿಗೆ ಇಡೀ ಮನೆಯನ್ನು ಆವರಿಸಿಕೊಂಡಿದ್ದು ನಮ್ರತಾ. ಪುರುಷರ ಸರಿ ಸಮಾನವಾಗಿ ನಿಂತುಕೊಂಡು ನಮ್ರತಾ ಫೈಟ್ ಕೊಡುತ್ತಾರೆ ಎಂದೇ ನಂಬಲಾಗಿತ್ತು. ಆದರೆ, ಬರ್ ಬರ್ತಾ ನಮ್ರತಾ ಚಾರ್ಮ್ ಕಳೆದುಕೊಂಡರು. ಹೊಂದಾಣಿಕೆಯ ಆಟ ಆಡಲು ಶುರು ಮಾಡಿದರು. ಆದ್ರೆ ಈಗ ಈಗ ಆಟ ಶುರು ಮಾಡಿದ್ದಾರೆ. ಕ್ಯಾಪಟ್ನ್ಸಿ ಟಾಸ್ಕ್ ಆಗಿ ಕ್ಯಾಪ್ಟನ್ ಆಗಿದ್ದರು. ಈಗ ನಮ್ರತಾ ಕೂಡ ಇತ್ತೀಚೆಗೆ ಮೆಚ್ಚುಗೆ ಪಡೆಯುತ್ತಿದ್ದಾರೆ. ಕಾರ್ತಿಕ್ ಅವರು ಮೊದಲಿನಿಂದಲೂ ನಮ್ರತಾ ಜೊತೆ ಕ್ಲೋಸ್ ಆಗೋಕೆ ಪ್ರಯತ್ನಿಸಿದ್ದರು.
ಸ್ನೇಹಿತ್ ಹೋದ ಮೇಲೆ ಇಬ್ಬರ ಮಧ್ಯೆ ಒಳ್ಳೆಯ ರ್ಯಾಪೋ ಬೆಳೆಯುತ್ತಿದೆ. ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗುತ್ತಿದ್ದಾರೆ. ಈಗ ಇಬ್ಬರೂ ಓಪನ್ ಆಗಿ ಫ್ಲರ್ಟ್ ಮಾಡಿದ್ದಾರೆ. ಇದು ಸಖತ್ ಫನ್ನಿ ಆಗಿತ್ತು. ನಮ್ರತಾ ಜೊತೆ ಡೇಟ್ಗೆ ಹೋಗಬೇಕು ಎಂಬುದು ಕಾರ್ತಿಕ್ ಕನಸು. ಮೊದಲಿನಿಂದಲೂ ಈ ಬಗ್ಗೆ ಮಾತನಾಡುತ್ತಲೇ ಬರುತ್ತಿದ್ದಾರೆ.
Lychee Fruit Benefits: ಲಿಚ್ಚಿ ಕಂಡು ಛೀ ಅನ್ಬೇಡಿ: ಈ ಹಣ್ಣು ತಿನ್ನುವುದರಿಂದಾಗುವ ಲಾಭಗಳು ಒಂದೆರಡಲ್ಲ
ಇದನ್ನು ನಮ್ರತಾ ಹಾಗೂ ಕಾರ್ತಿಕ್ ಇಬ್ಬರೂ ಫನ್ ಆಗಿಯೇ ಸ್ವೀಕರಿಸಿದ್ದಾರೆ. ತಮ್ಮ ತಾಯಿ ಬಂದಾಗಲೂ ಕಾರ್ತಿಕ್ ಈ ವಿಚಾರ ತೆಗೆದಿದ್ದರು. ‘ನಾನು ನಮ್ರತಾ ಜೊತೆ ಡೇಟ್ಗೆ ಹೋಗಲೇ’ ಎಂದು ಕೇಳಿದ್ದರು. ಈಗ ಕಾರ್ತಿಕ್ ಹಾಗೂ ನಮ್ರತಾ ಆಡಿದ ಮಾತು ಗಮನ ಸೆಳೆಯುತ್ತಿದೆ.
ಕಾರ್ತಿಕ್ ಅವರು ಅಡುಗೆ ಮನೆಗೆ ಹೊರಟಿದ್ದರು. ಈ ವೇಳೆ ಕಾರ್ತಿಕ್ ಅವರನ್ನು ನಮ್ರತಾ ಕರೆದರು. ‘ಐದು ನಿಮಿಷ ಇಲ್ಲಿ ಬನ್ನಿ. ಕುಳಿತು ನನ್ನನ್ನು ನೋಡಿ’ ಎಂದಿದ್ದಾರೆ. ಕಾರ್ತಿಕ್ ಈ ಮಾತನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಜೊತೆಗೆ ನಮ್ರತಾ ಇದ್ದಲ್ಲಿ ಹೋಗಿ ಕುಳಿತಿದ್ದಾರೆ. ‘ನಾನು ಜೋಕ್ ಮಾಡಿದ್ದು. ನೀವು ಗಂಭೀರವಾಗಿ ಸ್ವೀಕರಿಸಿದ್ರಲ್ಲ’ ಎಂದರು ನಮ್ರತಾ.
ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದೂ ಅದೇ. ಸುಮ್ನೆ ಹೋಗ್ತಾ ಇದ್ದವನ್ನ ಕರೆದ್ರೆ ಏನು ಮಾಡೋದು’ ಎಂದು ಕಾರ್ತಿಕ್ ಕೇಳಿದರು. ‘15 ದಿನದಲ್ಲಿ ಲವ್ ಆಗಿ, ಕಾರ್ತಿಕ್ನೇ ಬೇಕು ಅಂತ ಅತ್ತು ಕರೆದರೆ ಏನು ಮಾಡ್ತೀರಿ? ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾರ್ತಿಕ್ಗೆ ಏನು ಉತ್ತರ ಹೇಳಬೇಕು ಎಂಬುದೇ ತಿಳಿದಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.