ಬೆಂಗಳೂರು: ಜನಾದೇಶದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಿಂದ ದರೋಡೆಕೋರರು ಹಾಗೂ ಲೂಟಿಕೋರರ ಸಾಮ್ರಾಜ್ಯವಾಗಿ ಕರ್ನಾಟಕ ಬದಲಾದಂತಾಗಿದೆ ಎಂದು ಪರಿಷತ್ ಸದಸ್ಯ ಟಿಎ ಶರವಣ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ ಮತ್ತು ಬೀದರ್ ಎಟಿಎಮ್ ದರೋಡೆ ಪ್ರಕರಣ ಉಲ್ಲೇಖಿಸಿ ಸರ್ಕಾರದ ವಿರುದ್ಧ ಟಿಎ ಶರವಣ ಅವರು ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
ಕರ್ಣಾಟಕ ಲೂಟಿ ಕೋರರು ಮತ್ತು ದರೋಡೆಕೋರರ ಸಾಮ್ರಾಜ್ಯ ಆಗುತ್ತಿದೆ. ಸಾರ್ವಜನಿಕರಿಗೆ, ಉದ್ಯಮಿಗಳಿಗೆ, ಹಣಕಾಸು ಸಂಸ್ಥೆಗಳಿಗೆ, ಚಿನ್ನಾಭರಣ ಮಳಿಗೆಗಳಿಗೆ ರಕ್ಷಣೆ ಇಲ್ಲದೆ, ಇದೊಂದು ಜಂಗಲ್ ರಾಜ್ ಆಗಿರುವ ಗುಮಾನಿ ಬಂದಿದೆ. ಬೀದರ್ ನಲ್ಲಿ ಹಾಡು ಹಗಲೇ ನಡು ಬೀದಿಯಲ್ಲಿ ಸಿಬ್ಬಂದಿಯನ್ನು ಕೊಂದು ಬ್ಯಾಂಕ್ ಹಣ ದರೋಡೆ ಮಾಡಿ ಪರಾರಿ ಆಗಿದ್ದಾರೆ. ಇನ್ನೊಂದೆಡೆ ಮಂಗಳೂರಲ್ಲಿ ಸಹಕಾರಿ ಬ್ಯಾಂಕ್ ದರೋಡೆ, ಮೈಸೂರು ಬಳಿ ವಾಹನ ನಿಲ್ಲಿಸಿ , ಬೆದರಿಸಿ ದರೋಡೆ.. ಇವು ರಾಜ್ಯ ಭೀಕರತೆ ಮತ್ತು ಅಮಾನುಷತೆ ಯತ್ತ ಸಾಗುತ್ತಿರುವ ಲಕ್ಷಣ.
ಮಂಗಳವಾರ ಈ ಕೆಲಸಗಳನ್ನು ಮಾಡಿದ್ರೆ ನಿಮಗೆ ಬೇಡವೆಂದರೂ ಸಂಪತ್ತು ಹುಡುಕಿ ಬರುತ್ತೆ.!
ಇಂಥ ನೀಚ, ಹೇಯ ಕೃತ್ಯ ನಡೆಸಿ ಹೆದ್ದಾರಿಗಳಲ್ಲಿ, ಟೋಲ್ ಗಳ ಮದ್ಯೆ ಕೇಡಿಗಳು, ಕೊಲೆಗಡುಕರು ಹಾದು ಹೋದರೂ ಅವರನ್ನು ಹಿಡಿಯಲು ಪೊಲೀಸರ ಕೈಯಲ್ಲಿ ಸಾಧ್ಯವಿಲ್ಲದೆ ಇರುವುದು ಆಶ್ಚರ್ಯ ತಂದಿದೆ. ಹೊಯ್ಸಳ ವಾಹನ ಅಪರಾಧಿಗಳ ಪತ್ತೆ ಕೆಲ್ಸ ಬಿಟ್ಟು, ಬೇರೆ ಕೆಲಸಗಳಿಗೆ ಬಳಕೆ ಆಗುತ್ತಿರುವುದು ವಿಷಾದಕರ. ಈ ಘಟನೆಗಳಿಂದ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿರುವ ಉದ್ಯಮಿಗಳು ಭದ್ರತೆ ಇಲ್ಲದೆ ಹಿಂದೇಟು ಹಾಕುವಂತಾಗಿದೆ.
ಸಾರ್ವಜನಿಕರ ಬದುಕಿಗೆ ರಾಜ್ಯ ಸುರಕ್ಷಿತವಲ್ಲ ಎನ್ನುವ ಭಾವನೆ ಬಂದಿದ್ದು, ಇನ್ನು ಉದ್ಯಮಿಗಳು ಎಲ್ಲಿಂದ ಬರುತ್ತಾರೆ? ಇಷ್ಟೆಲ್ಲಾ ಆದರೂ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ನೀರೋ ದೊರೆಯಂತೆ ಬೆಳಗಾವಿ ಅಧಿವೇಶನದಲ್ಲಿ ಸುಳ್ಳು ಸುಳ್ಳು ಶಾಂತಿ ಮಂತ್ರದ ಪಿಟೀಲು ಬಾರಿಸುತ್ತಿರುವ ವ್ಯಂಗ್ಯ ವಾಗಿದೆ.
ರಾಜ್ಯದ ಜನರ, ಉದ್ಯಮಿಗಳ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಯಾವ ಸಭೆಯು ನಡೆದಿಲ್ಲ. ಯಾವ ಕ್ರಮವೂ ಇಲ್ಲ. ಅಧಿಕಾರ ಹಂಚಿಕೆ ರಾಜಕಾರಣ, ಸಿಎಂ ಮತ್ತು ಕೆಪಿಸಿಸಿ ಹುದ್ದೆ ಜಟಾಪಟಿ ಯಲ್ಲಿ ಮುಳುಗಿರುವ ಕಾಂಗ್ರೆಸ್ ಜನರ ಹಿತಾಸಕ್ತಿಯನ್ನು ಮರೆತಿದೆ. ಸರಕಾರದ ಈ ನಿಲುವನ್ನು ನಾನು ಬಲವಾಗಿ ಖಂಡಿಸುತ್ತೇನೆ. ರಾಜ್ಯದ ಗೃಹ ಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ ಎಂದು ಹೇಳುವ ಮೂಲಕ ಟಿಎ ಶರವಣ ಆಕ್ರೋಶ ಹೊರ ಹಾಕಿದ್ದಾರೆ.