ಬೆಂಗಳೂರು:- ಇಂಗ್ಲಿಷ್ ನಾಮಫಲಕ ವಿರೋಧಿಸಿ ಜೈಲು ಸೇರಿರುವ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಅವರು, ಇನ್ನೇನು ಕೆಲವೇ ನಿಮಿಷಗಳಲ್ಲಿ ಜೈಲಿನಿಂದ ರಿಲೀಸ್ ಆಗಲಿದ್ದಾರೆ.
ಹೀಗಾಗಲೇ ಬೇಲ್ ಕಾಪಿ ಪರಿಶೀಲನೆ ಪ್ರಕ್ರಿಯೆಯನ್ನು ಜೈಲು ಅಧಿಕಾರಿಗಳು ಮುಗಿಸಿದ್ದಾರೆ. ಕರವೇ ನಾರಾಯಣ ಗೌಡ ಬಿಡುಗಡೆ ಹಿನ್ನೆಲೆ ಜೈಲು ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಹಂತದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜೈಲು ಚೆಕ್ ಪೋಸ್ಟ್ ಐವತ್ತಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಗನಾಥಪುರ ಜಂಕ್ಷನ್ ಬಳಿ ಐವತ್ತಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಹೊಸರೋಡ್ ಜಂಕ್ಷನ್ ಬಳಿ ಮೂವತ್ತಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
ಜೈಲು ಮೇನ್ ಗೇಟ್ ಬಳಿ ಅಗ್ನೇಯ ವಿಭಾಗ ಡಿಸಿಪಿ ಬಾಬಾ ಸೇರಿದಂತೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮೂರು ಎಸಿಪಿ, ಆರು ಇನ್ಸ್ಪೆಕ್ಟರ್, ಹದಿನೈದು ಪಿಎಸ್ಐ ನಿಯೋಜನೆ ಮಾಡಲಾಗಿದೆ. ಒಟ್ಟು ಇನ್ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
ಪೊಲೀಸರ ಸರ್ಪಗಾವಲಿನಲ್ಲಿ ಕರವೇ ನಾರಾಯಣ ಗೌಡ ಬಿಡುಗಡೆ ಮಾಡಲಾಗುತ್ತದೆ.