ಬಾಗಲಕೋಟೆ : ಕನ್ನಡ ಮಾತನಾಡಿ ಎಂದಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಮುಖ್ಯರಸ್ತೆ ಬಂದ್ ಮಾಡಿ ಎಂ ಎಂ ಭದ್ರಣ್ಣವರ ಬಂಗಲೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ರಬಕವಿ ಬನಹಟ್ಟಿತಾಲೂಕಾ ದಂಡಾಧಿಕಾರಿ ಗಿರೀಶ್ ಸ್ವಾದಿರವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು ನಾನು ಹಲವಾರು ವರ್ಷಗಳಿಂದ ನೋಡಿದ್ದೆನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅದನ್ನು ಬಿಟ್ಟು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿದರೆ ಕರವೇ ಗಜಸೇನೆ ಸಹಿಸೊದಿಲ್ಲ ಎಂದರು. ಮರಾಠಿಗರು ಕರ್ನಾಟಕದ ಅತಿಥಿಗಳು ಎಂಬ ಅರಿವಿನಿಂದ ಬೆಳಗಾವಿಯಲ್ಲಿ ಇರಬೇಕು. ಮರಾಠ ಸಂಸ್ಕೃತಿ, ಆಚಾರ-ವಿಚಾರಗಳು ಇದ್ದರೆ ಮಹಾರಾಷ್ಟ್ರಕ್ಕೆ ಹೋಗಿ. ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡದಲ್ಲೇ ಮಾತಾನಾಡಬೇಕು. ಇಲ್ಲವಾದರೆ ಕರವೇ ಗಜಸೇನೆ ನಿಮಗೆ ತಕ್ಕ ಪಾಠ ಕಲಿಸುತ್ತೆ ಎಂದು ಎಚ್ಚರಿಕೆ ಸಂದೇಶ ಕೊಟ್ಟರು.
ಪಿಎಸ್ಎಸ್ಕೆ ಗುತ್ತಿಗೆ ನೌಕರರು ಹಾಗೂ ನಿರಾಣಿ ಗ್ರೂಫ್ಸ್ ನಡುವೆ ಜಟಾಜಟಿ
ಇದೇ ಸಂದರ್ಭದಲ್ಲಿ ಮಹಮ್ಮದ್ ಹುಸೇನ್ ಲೆಂಗ್ರೆ, ಶಾನೂರ ಗೋಲಭಾವಿ, ಕಲ್ಮೇಶ ಅಮ್ಮಜವಗೋಳ, ನರಸಿಂಹ ಗಾಡ್ಕರ್, ಫಯಾಜ್ ಕೊಯಿಮುತ್ತೂರ್, ಉಮೇಶ್ ಪಾತ್ರೊಟ್. ಇನ್ನೂ ಅನೇಕ ಕರವೇ ಗಜಸೇನೆಯ ಹಿರಿಯರು, ಯುವಕರು ಕಾರ್ಯಕರ್ತರು ಉಪಸ್ಥಿತರಿದ್ದರು.