ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅಭಿನಯದ ಕಾಂತಾರ (Kantara) ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಚಿನ್ನದ ಪದಕ ದಕ್ಕಿದೆ
ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಅಡಿ ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ (Gold Medal) ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕೋಣಗಳನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದರು.
Job : ಉದ್ಯೋಗ – ಸಂದರ್ಶನಕ್ಕೆ ಹಾಜರಾಗಿ, ಈ ಸಂಸ್ಥೆಯಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆ
ಬೆಂಗಳೂರು ಕಂಬಳಕ್ಕೆ ರಾಯಭಾರಿಯಾಗಿ ರಿಷಭ್ ಶೆಟ್ಟಿ ಇರಬೇಕಿತ್ತು. ಕಾಂತಾರ ಚಿತ್ರ ಯಶಸ್ವಿಗೆ ಕಂಬಳದ ಕೋಣಗಳು ಕಾರಣ. ಆದರೆ ಇವತ್ತು ಅವರು ಇಲ್ಲಿಗೆ ಬಂದಿಲ್ಲ. ಊರಿನ ಬಗ್ಗೆ ಇಡೀ ದೇಶಕ್ಕೆ ಪ್ರಚಾರ ಮಾಡುತ್ತಾರೆ ಎಂದರು