ದುಲೀಪ್ ಟ್ರೋಫಿಯಲ್ಲಿ ಕನ್ನಡಿಗನ ಕಮಾಲ್ ಮಾಡಿದ್ದು, ಕೇವಲ 8 ರನ್ಗಳಿಂದ ಶತಕ ಮಿಸ್ ಮಾಡಿಕೊಂಡಿದ್ದಾರೆ.
ಮಾಜಿ ಗ್ರಾಮ ಪಂಚಾಯತಿ ಸದಸ್ಯನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!
ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದಾರೆ. ದುಲೀಪ್ ಟ್ರೋಫಿಯ ಮೂರನೇ ಪಂದ್ಯ ಭಾರತ ಎ ಮತ್ತು ಭಾರತ ಡಿ ನಡುವೆ ನಡೆಯುತ್ತಿದೆ. ಭಾರತ ಡಿ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 124 ಎಸೆತಗಳನ್ನು ಎದುರಿಸಿ 15 ಬೌಂಡರಿಗಳ ಸಹಿತ 92 ರನ್ ಕಲೆಹಾಕಿದರು. ಆದರೆ ಕೇವಲ 8 ರನ್ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಪಡಿಕ್ಕಲ್ ಅವರ ಇನ್ನಿಂಗ್ಸ್ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತದೆ.
ಏಕೆಂದರೆ ಭಾರತ ಡಿ ತಂಡದ ಪರ ಪಡಿಕ್ಕಲ್ ಹೊರತಾಗಿ ಬೇರೆ ಯಾವ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾಗಲಿಲ್ಲ. ಇದಕ್ಕೆ ಉದಾಹರಣೆಯಾಗಿ ಪಡಿಕ್ಕಲ್ ಅವರ 92 ರನ್ಗಳನ್ನು ಸೇರಿಸಿ ಇಡೀ ತಂಡ ಕೇವಲ 183 ರನ್ಗಳಿಗೆ ಆಲೌಟ್ ಆಯಿತು.
ಒಂದು ವೇಳೆ ಪಡಿಕ್ಕಲ್ ಈ ಬಿಗ್ ಇನ್ನಿಂಗ್ಸ್ ಆಡಿರದಿದ್ದರೆ, ಭಾರತ ಡಿ ತಂಡದ ಸ್ಥಿತಿ ಇನ್ನು ಶೋಚನೀಯವಾಗಿರುತ್ತಿತ್ತು. ಇನ್ನು ಈ ಪಂದ್ಯದಲ್ಲಿ 92 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿರುವ ಪಡಿಕ್ಕಲ್, ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲೂ ಅರ್ಧಶತಕ ಸಿಡಿಸಿದ್ದರು.
2021 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ದೇವದತ್ ಪಡಿಕ್ಕಲ್ ಶ್ರೀಲಂಕಾ ಪ್ರವಾಸದಲ್ಲಿ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಈ ಪ್ರವಾಸದಲ್ಲಿ ಎರಡು ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದ ಅವರು 38 ರನ್ ಗಳಿಸಿದರು. ಆದರೆ ಇದಾದ ಬಳಿಕ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗಲಿಲ್ಲ
ಈ ವರ್ಷದ ಆರಂಭದಲ್ಲಿ, ದೇವದತ್ ಪಡಿಕ್ಕಲ್ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ 65 ರನ್ ಗಳಿಸಿದರು. ಆದರೆ ಇದೀಗ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ತಂಡದಲ್ಲಿ ಸ್ಥಾನ ನೀಡಿಲ್ಲ.
ದೇವದತ್ ಪಡಿಕ್ಕಲ್ ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 44.30ರ ಸರಾಸರಿಯಲ್ಲಿ 2348 ರನ್ ಗಳಿಸಿದ್ದಾರೆ. ಇದರಲ್ಲಿ 14 ಅರ್ಧಶತಕಗಳು ಮತ್ತು 6 ಶತಕಗಳು ಸೇರಿವೆ.