ಕನ್ನಡಿಗ KL ರಾಹುಲ್ ಅವರು, ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 38 ರನ್ ಕಲೆಹಾಕುವ ಮೂಲಕ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 16 ರನ್ ಬಾರಿಸಿದ್ದ ರಾಹುಲ್, ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 22 ರನ್ ಕಲೆಹಾಕಿದರು.
ಸೂರ್ಯ ನಮಸ್ಕಾರದಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಲಾಭದಾಯಕ!
ಈ 22 ರನ್ಗಳೊಂದಿಗೆ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 8000 ರನ್ ಪೂರೈಸಿದ್ದಾರೆ. ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 8 ಸಾವಿರ ರನ್ ಕಲೆಹಾಕಿದ ಭಾರತದ 17ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ 50 ಟೆಸ್ಟ್ ಪಂದ್ಯಗಳಲ್ಲಿ 86 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 8 ಶತಕ ಹಾಗೂ 16 ಅರ್ಧಶತಕಗಳೊಂದಿಗೆ ಒಟ್ಟು 2863 ರನ್ ಕಲೆಹಾಕಿದ್ದಾರೆ. ಹಾಗೆಯೇ 72 ಏಕದಿನ ಇನಿಂಗ್ಸ್ಗಳಿಂದ 7 ಶತಕ ಹಾಗೂ 18 ಅರ್ಧಶತಕಗಳೊಂದಿಗೆ 2851 ರನ್ ಬಾರಿಸಿದ್ದಾರೆ.
ಇನ್ನು ಟೀಮ್ ಇಂಡಿಯಾ 72 ಟಿ20 ಪಂದ್ಯಗಳಲ್ಲಿ 68 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ 2 ಶತಕ ಹಾಗೂ 22 ಅರ್ಧಶತಕಗಳೊಂದಿಗೆ ಒಟ್ಟು 2265 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 8 ಸಾವಿರ ರನ್ ಕಲೆಹಾಕಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.