ಕಲಬುರ್ಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೂಪರ್ ಮಾರ್ಕೆಟ್ ಶಾಖೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು MLC ಬಿಜಿ ಪಾಟೀಲ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಂದರೇಶ್ ಬಾಬು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು..
ಉದ್ಘಾಟನೆ ನಂತ್ರ ಪುಟಾಣಿ ಮಕ್ಕಳ ಸಮೂಹ ನೃತ್ಯ ಎಲ್ಲರ ಮನ ಸೆಳೆಯಿತು.ಅದ್ರಲ್ಲೂ ಅಣ್ಣಾವ್ರು ನಟಿಸಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮಕ್ಕಳು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ಇದೇವೇಳೆ ಕನ್ನಡ ಗೀತೆಗಳನ್ನ ಹಾಡುವ ಮೂಲಕ ಬ್ಯಾಂಕಿನ ಸಿಬ್ಬಂದಿಗಳು ರಾಜ್ಯೋತ್ಸವ ಕ್ಕೆ ಮೆರಗು ತಂದ್ರು..
ಬ್ಯಾಂಕಿನ DGM ಶ್ರೀನಿವಾಸರಾವ್ AGM ಸುಮಾ ಹಾಗು ನೌಕರರ ಸಂಘದ ನವೀನ್ ಕಾಗಲಕರ್ ಸೇರಿ ಇಡೀ ಸಿಬ್ಬಂದಿ ಕನ್ನಡದ ಹಬ್ಬದಲ್ಲಿ ಉಪಸ್ತಿತರಿದ್ದರು.