ಕೆಆರ್ ಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಧೀಮಂತ ಭಾಷೆ ಕನ್ನಡವಾಗಿದೆ ಎಂದು ಸಮಾಜಸೇವಕ ಆರ್.ಮಂಜುನಾಥ್ ತಿಳಿಸಿದರು. ರಾಮಮೂರ್ತಿನಗರ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು,
ಕನ್ನಡದ ಇತಿಹಾಸ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಜೊತೆ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕನ್ನಡವನ್ನು ಹೆಚ್ಚು ಬಳಸುವ ಮುಖಾಂತರ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ, ಕನ್ನಡ ಭಾಷೆಯ ಮಹತ್ವ ತಿಳಿದು ಬಾಳಿದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕವಾಗುತ್ತದೆ, ಕರ್ನಾಟಕ ಏಕೀಕರಣವಾಗಲು ನಾಡಿನ ಹಲವು ಕವಿಗಳು,ನಟರು,ವಿಚಾರವಂತರು ಸಾಹಿತಿಗಳು ಸೇರಿದಂತೆ ಹಲವರ ಕೊಡುಗೆ ಅಪಾರವಾಗಿದ್ದು,
ಅವರ ಹೋರಾಟದಿಂದಲೇ ನಾವಿಂದ ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬಿ.ವಿ.ಭಾರತಿ ಮುಖಂಡರಾದ ಎಮ್.ಭಕ್ತಣ್ಣ, ಚಂದ್ರು,ಹರಿ,ಪರಮೇಶ್ವರಯ್ಯ,ಲೋಕೇಶ್ ಮುಂತಾದವರು ಇದ್ದರು.