ಕನ್ನಡ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚಿಕೊಳ್ಳುತ್ತಿರೋ ಹೊತ್ತಿಗೆ,ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಾತ್ರ ಸೀಟು ಪಡೆಯೋದಕ್ಕೆ ಹರಸಾಹಸ ನಡೆಯುತ್ತೆ.ಇಲ್ಲಿ ಪ್ರವೇಶ ಪರೀಕ್ಷೆ ಬರೆದೇ ಸೀಟನ್ನ ಗಿಟ್ಟಿಸಿಕೊಳ್ಳಬೇಕಾಗುತ್ತೆ.ಅಚ್ಚರಿ ಅಂದ್ರೆ, ಇಲ್ಲಿರೋ 150 ಸೀಟಿಗೆ ಅರ್ಜಿ ಸಲ್ಲಿಸುವ ಮಕ್ಕಳ ಸಂಖ್ಯೆಯಂತೂ 20 ಸಾವಿರ ಅಂದ್ರೆ ನೀವು ನಂಬ್ಲೇಬೇಕು. ಹಾಗಿದ್ರೆ ಈ ಶಾಲೆ ಯಾವುದು? ಕನ್ನಡದ ಆ ಶಾಲೆಗಿರುವ ಅಂತಹ ಗತ್ತು,ಡಿಮ್ಯಾಂಡು ಏನು ಅನ್ನೋದನ್ನ ನೀವೆಲ್ಲರೂ ನೋಡ್ಲೇಬೇಕು.
ಅಬ್ಬ.. ಅಬ್ಬಬ್ಬ.. ಇವರೆಲ್ಲ ಕನ್ನಡ ಮಾಧ್ಯಮ ಶಾಲೆಯ ತರಗತಿಯೊಂದರ ಪ್ರವೇಶಕ್ಕೆ ಹೀಗೆ ಮುಗಿ ಬಿದ್ದಿದ್ದಾರೆ ಅಂದ್ರೆ ನೀವೆಲ್ಲ ನಂಬ್ಲೇಬೇಕು. ಅಂತಹ ತಾಕತ್ತು ಕನ್ನಡ ಮಾಧ್ಯಮಕ್ಕಿದೆ ಅಂತಾ ತೋರಿಸಿಕೊಟ್ಟಿರೋದು ಶಿಕ್ಷಣಕ್ಕೆ ಹೆಸರುವಾಸಿಯಾಗಿರೋ ಕಡಲ ತಡಿಯ ಹೆಸರಾಂತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ. ನುಡಿಸಿರಿ,ವಿರಾಸತ್ ಮೂಲಕ ಮನೆಮಾತಾಗಿರುವ ದಕ್ಷಿಣ ಜಿಲ್ಲೆಯ ಶಿಕ್ಷಣ ಕಾಶಿ ಮೂಡುಬಿದ್ರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ,
ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿ-ತಪ್ಪಿಯೂ ಸೋಂಪು ಕಾಳನ್ನು ತಿನ್ನಬೇಡಿ..!
ಕನ್ನಡ ಮಾಧ್ಯಮ ಶಿಕ್ಷಣದಲ್ಲೊಂದು ಕ್ರಾಂತಿ ಮೊಳಗಿಸಿದೆ.ಅಂದಹಾಗೆ ಹೀಗೆ ಪರೀಕ್ಷೆ ನಡೆದಿದ್ದು 2025-26ನೇ ಸಾಲಿನ 6,7,8 ಮತ್ತು 9ನೇ ತರಗತಿಗಾಗಿದೆ. ಈ 4 ತರಗತಿಗಳ 150 ಸೀಟುಗಳಿಗೆ 20 ಸಾವಿರಕ್ಕೂ ಅಧಿಕ ಮಕ್ಕಳು ಅರ್ಜಿ ಸಲ್ಲಿಸಿದ್ದು, ಮೂಡಬಿದ್ರೆಯ ಆಳ್ವಾಸ್ ಕ್ಯಾಂಪಸ್ನಲ್ಲಿ ದಾಖಲೆ ಅನ್ನೋ ರೀತಿಯಲ್ಲಿ ಪ್ರವೇಶ ಪರೀಕ್ಷೆ ನಡೆದಿದೆ.ಕನ್ನಡ ಮಾಧ್ಯಮಕ್ಕೆ ಇರೋ ತಾಕತ್ತನ್ನ ಈ ಶಾಲೆ ತೋರಿಸಿಕೊಟ್ಟಿದೆ.
:ಡಾ.ಎಂ.ಮೋಹನ್ ಆಳ್ವ ನೇತೃತ್ವದ ಮೂಡುಬಿದ್ರೆಯ ಪುತ್ತಿಗೆಯಲ್ಲಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ವರ್ಷದಿಂದ ವರ್ಷಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2025-26ನೇ ಸಾಲಿನ ಪ್ರವೇಶ ಪರೀಕ್ಷೆಗಾಗಿ ಪತ್ರಿಕಾ ಪ್ರಕಟಣೆ ನೀಡಿ,ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಮುಂದಿನ ಶೈಕ್ಷಣಿಕ ದಾಖಲಾತಿಗಾಗಿ 20 ಸಾವಿರಕ್ಕಿಂತ ಹೆಚ್ಚು ಮಕ್ಕಳು ಅರ್ಜಿ ಸಲ್ಲಿಸಿ 18 ಸಾವಿರಕ್ಕಿಂತ ಹೆಚ್ಚು ಮಕ್ಕಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಾರೆ.ವಿಶೇಷ ಅಂದ್ರೆ ಕೇರಳ, ಮಹಾರಾಷ್ಟ್ರದಿಂದಲೂ ಮಕ್ಕಳು ಕನ್ನಡ ಮಾಧ್ಯಮ ಶಾಲೆಯ ಸೇರ್ಪಡೆಗೆ ಆಸಕ್ತಿ ತೋರಿದ್ದಾರೆ.
ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು 6ನೇ ತರಗತಿಯಿಂದ 10ನೇ ತರಗತಿವರೆಗೆ ಉಚಿತ ವಸತಿ ಊಟೋಪಚಾರ ಸಹಿತ ಶಿಕ್ಷಣವನ್ನು ಪಡೆಯುತ್ತಾರೆ. ಕರ್ನಾಟಕದ ಹೆಚ್ಚಿನ ಎಲ್ಲಾ ಜಿಲ್ಲೆಗಳಿಂದಲೂ ಮಕ್ಕಳು ಪ್ರವೇಶ ಪರೀಕ್ಷೆ ಗೆ ಹಾಜರಾಗಿದ್ದರು.ಇಲ್ಲಿ ಶಿಕ್ಷಣ ಪಡೆಯೋ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ ಎಂದು ವಿದ್ಯಾರ್ಥಿಗಳ ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಸೊರಗುತ್ತಿರೋ ಈ ಹೊತ್ತಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಮಾತ್ರ ವರ್ಷದಿಂದ ವರ್ಷಕ್ಕೆ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡುತ್ತಿದೆ. ಇದೆಲ್ಲಕ್ಕೂ ಕಾರಣವಾಗಿರೋದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಗುಣಮಟ್ಟ, ಶಿಸ್ತು ಹಾಗೂ ಪೂರಕ ವಾತಾವರಣವೇ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ