ಕನ್ನಡ ಚಿತ್ರರಂಗದ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ ವರ್ಷ 2023. ಹಲವು ಹೊಸ, ಗುಣಮಟ್ಟದ, ಕಂಟೆಂಟ್ ಆಧರಿತ ಸಿನಿಮಾಗಳು ಕನ್ನಡ ಚಿತ್ರರಂಗದಿಂದ ಬಂದಿದ್ದು ಮಾತ್ರವಲ್ಲ ನೂರಾರು ಕೋಟಿ ಗಳಿಕೆಯನ್ನೂ ಮಾಡಿವೆ. 2023 ವರ್ಷವನ್ನು ಕನ್ನಡ ಚಿತ್ರರಂಗ ಬೆಂಚ್ ಮಾರ್ಕ್ ಮಾದರಿಯಲ್ಲಿ ನೆನಪಿಟ್ಟುಕೊಳ್ಳಲಿದೆ. ಆದರೆ ಈ ವರ್ಷ ಎಲ್ಲವೂ ಸಿಹಿಯೇ ಆಗಿರಲಿಲ್ಲ. ಹಲವು ಖ್ಯಾತ ಕಲಾವಿದರು ನಮ್ಮನ್ನಗಲಿ ಹೋಗಿದ್ದಾರೆ.
2023ರಲ್ಲಿ ಅಗಲಿದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಯಾರು? ಕಾರಣ ಏನು? ಮುಂತಾದ ಮಾಹಿತಿ ಇಲ್ಲಿದೆ.
ಸ್ಪಂದನಾ ವಿಜಯ್ ಅವರಿಗೆ ಹೃದಯಾಘಾತ
ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರಿಗೆ ಹೃದಯಘಾತವಾಗಿತ್ತು. ಇವರು ನಿಧನರಾಗಿ 6 ತಿಂಗಳು ಕಳೆದಿವೆ.
74ನೇ ವಯಸ್ಸಿಗೆ ನಟ ಲಕ್ಷ್ಮಣ್ ನಿಧನ
ಕನ್ನಡದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟ ಲಕ್ಷ್ಮಣ್ ಅವರು 74ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ರಾಜ್ಕುಮಾರ್, ಶಂಕರ್ ನಾಗ್, ಅಂಬರೀಶ್ ಅವರ ಸಿನಿಮಾದಲ್ಲಿ ನಟಿಸಿದ್ದರು.
ಕಿಡ್ನಿ ವೈಫಲ್ಯದಿಂದ ನಿರ್ಮಾಪಕ ಕೆ ಸಿ ಮೋಹನ್ ನಿಧನ
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ಮಾಪಕ ಕೆ ಸಿ ಮೋಹನ್ ಅವರು 64ನೇ ವಯಸ್ಸಿಗೆ ನಿಧನರಾಗಿದ್ದಾರೆ. ‘ಭಲೇ ಚತುರ’, ‘ರಾಮರಾಜ್ಯದಲ್ಲಿ ರಾಕ್ಷಸರು’, ‘ಧರ್ಮಯುದ್ಧ’, ‘ಜಯಸಿಂಹ’, ‘ಅಂತಿಮ ತೀರ್ಪು’ ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು.
85ನೇ ವಯಸ್ಸಿಗೆ ಹಿರಿಯ ನಟಿ ಲೀಲಾವತಿ ನಿಧನ
600ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಲೀಲಾವತಿ ಅವರು
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ 85ನೇ ವಯಸ್ಸಿಗೆ ನಿಧನರಾದರು.
39ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಿತಿನ್ ಗೋಪಿ
ಕೊಳಲು ವಾದಕ ಗೋಪಿ ಅವರ ಪುತ್ರ ನಿತಿನ್ ಅವರು 39ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಮುತ್ತಿನಂಥ ಹೆಂಡತಿ’, ‘ನಿಶ್ಯಬ್ದ’, ‘ಕೆರಳಿದ ಕೇಸರಿ’, ‘ಚಿರಬಾಂಧವ್ಯ’ ಮುಂತಾದ ಸಿನಿಮಾಗಳಲ್ಲಿ ನಿತಿನ್ ನಟಿಸಿದ್ದರು.
ಆತ್ಮಹತ್ಯೆಗೆ ಶರಣಾದ ನಟ ಸಂಪತ್ ಜಯರಾಮ್
‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದ ಸಂಪತ್ ಜಯರಾಮ್ ಅವರ 35 ವರ್ಷಕ್ಕೆ ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
‘ಅಮೃತವರ್ಷಿಣಿ’ ನಟ ಶರತ್ ಬಾಬು ನಿಧನ
ಬಹು ಅಂಗಾಂಗ ಹಾನಿಯಿಂದ ಬಳಲುತ್ತಿದ್ದ ಬಹುಭಾಷಾ ನಟ ಶರತ್ ಬಾಬು ಅವರು ಹೈದರಾಬಾದ್ನಲ್ಲಿ ಕಳೆದ ಮೇ ತಿಂಗಳಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
25ನೇ ವಯಸ್ಸಿಗೆ ನಟ ಪವನ್ ವಿಧಿವಶ